ಅಜಿತ್ ರಾವ್ ಅಭಿನಯದ ಕೃಷ್ಣ ಎಸ್ ಆರ್ ನಿರ್ದೇಶನದ ‘ಡಿಯರ್ ಪೊರ್ಕಿ’ ಕಿರು ಚಿತ್ರ ಇಂದು A2 ಮೂವೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಶಾರ್ಟ್ ಫಿಲಂ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರ ಗಮನ ಸೆಳೆದಿದೆ.
ಎನರ್ಜಿ ಸೆನ್ಸ್ ಪ್ರೊಡಕ್ಷನ್ ಸಂಸ್ಥೆ ಈ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದು, ಶೇಖರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಜಿತ್ ರಾವ್, ರಿಷಿತಾ, ಕೃಷ್ಣ ಎಸ್ ಆರ್, ಹಾಗೂ ಕೊಯೇನಾ, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಓಂಕಾರ್ ತಾಶಿಲ್ದಾರ್ ಸಂಕಲನ, ಚೈತನ್ಯಗಿರಿ ಮತ್ತು ವಿಜಯ್ ಛಾಯಾಗ್ರಹಣವಿದೆ. ನಿರ್ದೇಶಕ ಕೃಷ್ಣ ಎಸ್ ಆರ್ ಅವರೇ ಸಂಭಾಷಣೆ ಬರೆದಿದ್ದಾರೆ.