ಬೆಂಗಳೂರು: ಚಿನ್ನ ಗಿರವಿ ಇಡಲು ಬಂದಿದ್ದ ಗ್ರಾಹಕನೇ ಶಾಪ್ ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ನಗರದ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ.
ಗಿರವಿ ಇಡಲು ತಂದಿದ್ದ ಚಿನ್ನಕ್ಕೆ 50,000 ರೂ. ನೀಡುವುದಾಗಿ ಹೇಳಿದ್ದಕ್ಕೆ ಸಿಟ್ಟಿಗೆದ್ದು ಕೃತ್ಯವೆಸಗಿದ್ದಾನೆ. ಗಿರವಿ ಅಂಗಡಿ ಮಾಲೀಕ ಭವರ್ ಲಾಲ್(54) ಅವರಿಗೆ ಗಾಯಗಳಾಗಿವೆ. ಪೆಟ್ರೋಲ್ ಸುರಿದು ಗ್ರಾಹಕ ಗಿರವಿ ಅಂಗಡಿಗೆ ಬೆಂಕಿ ಇಟ್ಟಿದ್ದಾನೆ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.