ನಿಮ್ಮ ಸ್ವಭಾವವು ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ನೀವು ಧರಿಸಿರುವ ಉಡುಪುಗಳನ್ನು ನೋಡಿ ಇತರರು ನಿಮ್ಮ ಸ್ವಭಾವವನ್ನು ಲೆಕ್ಕ ಹಾಕುತ್ತಾರೆ. ಅಷ್ಟೇ ಅಲ್ಲ ನೀವು ಧರಿಸುವ ಪಾದರಕ್ಷೆಗಳು ಕೂಡ ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಇದ್ದಂತೆ. ಯಾವ ರೀತಿಯ ಶೂ ಮತ್ತು ಚಪ್ಪಲಿ ಧರಿಸುವವರು ಯಾವ ರೀತಿಯ ವ್ಯಕ್ತಿತ್ವ ಹೊಂದಿರುತ್ತಾರೆ ಅನ್ನೋದನ್ನು ನೋಡೋಣ.
ಚಪ್ಪಲಿ ಅಥವಾ ಸ್ಲಿಪ್ಪರ್ಸ್
ಸದಾ ಚಪ್ಪಲಿ ಧರಿಸುವವರು ಸಾಮಾನ್ಯವಾಗಿ ಸಮಾಜದ ಒತ್ತಡದಲ್ಲಿ ಬದುಕುತ್ತಾರೆ. ಎಂತಹ ತ್ಯಾಗಕ್ಕೂ ಸಿದ್ಧರಿರುತ್ತಾರೆ. ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಅದಕ್ಕೆ ಬದ್ಧರಾಗಿರುತ್ತಾರೆ. ಅವರ ನಿರ್ಧಾರವನ್ನು ಬದಲಿಸುವುದು ಕಷ್ಟ.
ಫ್ಲಾಟ್ ಚಪ್ಪಲಿ
ಚಪ್ಪಟೆಯಾದ ಫ್ಲಾಟ್ ಚಪ್ಪಲಿ ಧರಿಸುವವರು ಡೌನ್ ಟು ಅರ್ತ್ ಸ್ವಭಾವದವರಾಗಿರುತ್ತಾರೆ. ಅವರು ಪರಿಪೂರ್ಣ ಕೆಲಸವನ್ನು ಇಷ್ಟಪಡುತ್ತಾರೆ ಮತ್ತು ಪರಿಪೂರ್ಣ ಕೆಲಸವನ್ನು ತಾವೇ ಮಾಡುತ್ತಾರೆ. ತುಂಬಾ ಸೌಮ್ಯ ಸ್ವಭಾವದವರು. ಅವರು ತಮಗಿಂತ ಇತರರ ಬಗ್ಗೆ ಹೆಚ್ಚು ಚಿಂತಿಸುತ್ತಾರೆ.
ಹೈಹೀಲ್ಡ್ ಬೂಟುಗಳು
ಎತ್ತರದ ಹಿಮ್ಮಡಿಯ ಬೂಟುಗಳನ್ನು ಧರಿಸುವವರು ಜವಾಬ್ದಾರಿಯುತ ನಾಗರಿಕರು. ಯಾವ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕೆಂದು ಅವರಿಗೆ ತಿಳಿದಿದೆ. ಇವರು ನ್ಯಾಯದ ಬಗ್ಗೆ ಮಾತನಾಡುತ್ತಾರೆ ಮತ್ತು ತಾವೂ ಸಹ ಅದೇ ಹಾದಿಯಲ್ಲಿ ನಡೆಯುತ್ತಾರೆ.
ಲೋಫರ್ ಶೂಗಳು
ಲೋಫರ್ ಶೂಗಳನ್ನು ಧರಿಸುವವರು ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ. ಯಾವಾಗಲೂ ಉತ್ತಮ ಸ್ನೇಹಿತನ ಹುಡುಕಾಟದಲ್ಲಿರುತ್ತಾರೆ. ಎಲ್ಲಿ ಕೆಲಸ ಮಾಡಿದರೂ ಒಳ್ಳೆಯವರ ಜೊತೆ ಸ್ನೇಹ ಬೆಳೆಸಲು ಇಷ್ಟಪಡುತ್ತಾರೆ. ದೊಡ್ಡ ಹುದ್ದೆಯಲ್ಲಿದ್ದರೆ ಒಳ್ಳೆಯವರನ್ನು ನೇಮಕ ಮಾಡಿಕೊಳ್ಳಲು ಬಯಸುತ್ತಾರೆ. ಅವರಿಗೆ ರಾಜಕೀಯ ಅಧ್ಯಯನ ಮಾಡುವ ಅಭ್ಯಾಸವಿಲ್ಲ.
ಪಂಪ್ಸ್ ಮತ್ತು ಹೈ ಹೀಲ್ಸ್
ಪಂಪ್ಸ್ ಅಥವಾ ಹೈ ಹೀಲ್ಸ್ ಧರಿಸುವ ಹುಡುಗಿಯರಲ್ಲಿ ತಂಡವನ್ನು ಮುನ್ನಡೆಸುವ ಸಾಮರ್ಥ್ಯವಿರುತ್ತದೆ. ಅವರ ನಿರ್ಣಯದ ಸಾಮರ್ಥ್ಯವು ತುಂಬಾ ಪ್ರಬಲವಾಗಿರುತ್ತದೆ. ಪ್ರತಿ ವಿಭಾಗವನ್ನು ಹೇಗೆ ಸಮರ್ಥವಾಗಿ ಮುನ್ನಡೆಸಬೇಕು ಎಂಬುದು ಅವರಿಗೆ ತಿಳಿದಿದೆ.
ರನ್ನಿಂಗ್ ಶೂ
ರನ್ನಿಂಗ್ ಬೂಟುಗಳನ್ನು ಧರಿಸುವ ಜನರು ಹೆಚ್ಚಿನ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಎಲ್ಲವನ್ನೂ ಉತ್ಸಾಹದಿಂದ ಮಾಡುತ್ತಾರೆ. ಯಾವಾಗಲೂ ತಮ್ಮ ಗುರಿಯತ್ತ ಗಮನಹರಿಸುತ್ತಾರೆ.
ಸ್ನೀಕರ್
ಸ್ನೀಕರ್ ಧರಿಸುವವರು ಸಾಮಾನ್ಯವಾಗಿ ತಮಾಷೆಯ ಸ್ವಭಾವದವರಾಗಿರುತ್ತಾರೆ. ಹೋದಲ್ಲೆಲ್ಲಾ ಗುರುತಿಸಿಕೊಳ್ಳುತ್ತಾರೆ. ಯಾವಾಗಲೂ ಫಿಟ್ ಆಗಿರಬೇಕೆಂಬ ಹಂಬಲ ಅವರಲ್ಲಿರುತ್ತದೆ.
ವೆಡ್ಜಸ್
ವೆಡ್ಜಸ್ ಧರಿಸುವವರು ಗಟ್ಟಿ ಹೃದಯದವರಾಗಿರುತ್ತಾರೆ. ನೋಡಲು ಕೂಡ ಆಕರ್ಷಕವಾಗಿರುತ್ತಾರೆ. ತನ್ನನ್ನು ತಾನು ಇತರರಿಗಿಂತ ಉತ್ತಮವಾಗಿ ನೋಡಿಕೊಳ್ಳುತ್ತಾರೆ.