ಸಾಮುದ್ರಿಕ ಶಾಸ್ತ್ರದ ಪ್ರಕಾರ ಮಾನವ ದೇಹದ ಪ್ರತಿಯೊಂದು ಭಾಗದ ರಚನೆಯು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ವ್ಯಕ್ತಿಯ ಭವಿಷ್ಯವನ್ನು ಸಹ ಈ ಮೂಲಕ ಊಹಿಸಬಹುದು. ದೇಹದ ಮೇಲೆ ಇರುವ ಮಚ್ಚೆಗಳು, ಕೈ ಕಾಲುಗಳ ಆಕಾರ, ಗುರುತುಗಳು, ಹಲ್ಲುಗಳ ಆಕಾರದಿಂದ ಬಹಳಷ್ಟು ಅಂಶಗಳನ್ನು ನಿರ್ಧರಿಸಬಹುದು. ಕಿವಿ ಕೂಡ ದೇಹದ ಪ್ರಮುಖ ಅಂಗ. ಈ ಮೂಲಕ ಶಬ್ದವನ್ನು ಕೇಳುವ ಸಾಮರ್ಥ್ಯವನ್ನು ನಾವು ಪಡೆಯುತ್ತೇವೆ. ಆದರೆ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕಿವಿಗಳ ಆಕಾರದಿಂದಲೇ ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು.
ಅಗಲವಾದ ಕಿವಿಗಳು – ಅಗಲವಾದ ಕಿವಿಗಳನ್ನು ಹೊಂದಿರುವವರನ್ನು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಇವರು ವ್ಯಾಪಾರದ ಮೂಲಕ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸಿ ಅಪಾರ ಸಂಪತ್ತಿನ ಒಡೆಯರಾಗುತ್ತಾರೆ. ಇವರು ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅತ್ಯಂತ ಭಾವನಾತ್ಮಕವಾಗಿರುತ್ತಾರೆ. ಇತರರ ಸಂತೋಷ ಮತ್ತು ದುಃಖದ ಬಗ್ಗೆ ಕಾಳಜಿ ವಹಿಸುತ್ತಾರೆ.
ದೊಡ್ಡ ಕಿವಿಗಳು – ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ದೊಡ್ಡ ಗಾತ್ರದ ಕಿವಿಗಳನ್ನು ಹೊಂದಿರುವವರು ತುಂಬಾ ಶ್ರಮಜೀವಿಗಳು. ಅವರಿಗೆ ದೂರದೃಷ್ಟಿಯಿದೆ. ಅದರ ಸಹಾಯದಿಂದ ಅವರು ಯಾವುದೇ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುತ್ತಾರೆ. ಇದರಿಂದ ಇವರ ಆರ್ಥಿಕ ಸ್ಥಿತಿಯೂ ಸದೃಢವಾಗುತ್ತದೆ.
ಸಣ್ಣ ಕಿವಿಗಳು – ಕಿವಿಗಳು ಸಾಮಾನ್ಯ ಗಾತ್ರಕ್ಕಿಂತ ಚಿಕ್ಕದಾಗಿದ್ದರೆ ಅಂಥವರು ವಿಶ್ವಾಸಾರ್ಹರು ಮತ್ತು ಜನರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಇವರು ಕಲಾ ಪ್ರೇಮಿಗಳು. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತಾರೆ. ಆದರೆ ಅವರ ಕೋಪ ಮಾತ್ರ ಸುಲಭವಾಗಿ ಶಾಂತವಾಗುವುದಿಲ್ಲ.
ಸುರುಳಿಯಾಕಾರದ ಕಿವಿಗಳು – ಕೆಲವರಿಗೆ ಕಿವಿಗಳು ಬಾಗಿದಂತಿರುತ್ತವೆ. ಇವರು ಅವರ ಮನಸ್ಸಿನ ಯಜಮಾನರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಯಾವುದೇ ಕೆಲಸದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಯಾವುದೇ ಕೆಲಸವನ್ನು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಾರೆ. ಇವರು ಹೆಚ್ಚು ಭಾವುಕರಾಗಿರುವುದಿಲ್ಲ.