ʼಶ್ರಾವಣʼ ಮಾಸದೊಂದಿಗೆ ಶುರುವಾಗುತ್ತೆ ಹಬ್ಬಗಳ ಸಾಲು 07-08-2024 4:40AM IST / No Comments / Posted In: Latest News, Live News, Astro ಆಷಾಢಮಾಸ ಮುಗಿದು ಶ್ರಾವಣ ಮಾಸ ಆರಂಭವಾಗಿದೆ. ಶ್ರಾವಣ ಮಾಸ ಆರಂಭವಾಯಿತೆಂದರೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಹೆಣ್ಣು ಮಕ್ಕಳು ತವರಿನ ದಾರಿ ಕಾಯುತ್ತಾರೆ. ಶ್ರಾವಣ ಮಾಸ ಹಿಂದೂಗಳ ಸಂಪ್ರದಾಯದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಈ ಮಾಸದಲ್ಲಿ ಶ್ರವಣ(ಕಿವಿ)ಗಳು ಒಳ್ಳೆಯದನ್ನು ಕೇಳಲಿ ಎಂದು ಹರಿಕತೆ, ಭಜನೆ ಮಾಡಲಾಗುತ್ತದೆ. ದೇವಾಲಯಗಳಲ್ಲಿಯೂ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತದೆ. ಶ್ರಾವಣಮಾಸದಲ್ಲಿ ಬರುವ ಒಂದೊಂದು ಹಬ್ಬಗಳಿಗೆ ತನ್ನದೇ ಆದ ಐತಿಹ್ಯವಿದೆ. ಮಹಿಳೆಯರು ಮಂಗಳಗೌರಿ, ಸಂಪತ್ ಗೌರಿ, ಸ್ವರ್ಣಗೌರಿ, ಶುಕ್ರಗೌರಿ ವ್ರತಗಳನ್ನಾಚರಿಸುತ್ತಾರೆ. ಭೀಮನ ಅಮಾವಾಸ್ಯೆಯಂದು ಗಂಡನ ಪಾದಪೂಜೆ ನೆರವೇರಿಸುತ್ತಾರೆ. ಇನ್ನು ನಾಗಚೌತಿ, ನಾಗಪಂಚಮಿ, ವರಮಹಾಲಕ್ಷ್ಮಿ ರಕ್ಷಾ ಬಂಧನ ಮೊದಲಾದವು ಶ್ರಾವಣ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳಾಗಿವೆ. ಶ್ರಾವಣಮಾಸದಲ್ಲಿ ಹೆಚ್ಚಿನ ಹಬ್ಬಗಳು ಬರುವುದರಿಂದ ವಿಶೇಷವಾಗಿ ಆಚರಿಸಲಾಗುತ್ತದೆ. – ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ. ತಪ್ಪದೆ ಕರೆ ಮಾಡಿ: ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358