
ಹಲವು ವಿಧದ ಎಣ್ಣೆಗಳು ನಿಮ್ಮ ತ್ವಚೆಯ ಸೌಂದರ್ಯವನ್ನೂ ಕಾಪಾಡುತ್ತವೆ. ಹೇಗೆಂಬುದು ನಿಮಗೆ ಗೊತ್ತೇ?
ಹದಿಹರೆಯದಲ್ಲಿ ಕಾಡುವ ಮೊಡವೆಗಳಿಗೆ ಟೀ ಟ್ರೀ ಎಣ್ಣೆಯನ್ನು ಬಳಸುವುದರಿಂದ ಪರಿಹಾರ ಕಂಡುಕೊಳ್ಳಬಹುದು. ಇದು ಮೊಡವೆ ಬಂದು ಹೋದ ಬಳಿಕ ಉಳಿಯುವ ಕಲೆಯ ಸಮಸ್ಯೆಯನ್ನೂ ದೂರಮಾಡುತ್ತದೆ.
ಇದರಲ್ಲಿ ರಾಸಾಯನಿಕ ಅಂಶಗಳ ಪ್ರಮಾಣ ಕಡಿಮೆ ಇದ್ದು ಮೊಡವೆಗಳನ್ನು ಬರದಂತೆಯೂ ತಡೆಯುತ್ತದೆ. ಮುಖದಲ್ಲಿ ಎಣ್ಣೆಯಂಶ ಹೆಚ್ಚಿದ್ದರೆ ಗ್ರೇಪ್ ಸೀಡ್ ಆಯಿಲ್ ಬಳಸಿ ನೋಡಿ. ಇದು ಮುಖದ ತ್ವಚೆಯ ಸಣ್ಣ ರಂಧ್ರಗಳಲ್ಲಿ ಉತ್ಪತ್ತಿಯಾಗುವ ಎಣ್ಣೆಯ ಅಂಶವನ್ನು ಕಡಿಮೆ ಮಾಡುತ್ತದೆ.
ತುಸು ದುಬಾರಿಯಾದರೂ ಮಾರುಕಟ್ಟೆಯಲ್ಲಿ ಸಿಗುವ ಆರ್ಗನ್ ಆಯಿಲ್ ಗಳು ಉತ್ತಮ ಪರಿಣಾಮ ಬೀರುತ್ತವೆ. ಇವು ಮುಖದ ಮೇಲಿನ ಸುಕ್ಕನ್ನು ನಿವಾರಿಸುತ್ತವೆ. ನಿಮ್ಮ ವಯಸ್ಸನ್ನು ಕಡಿಮೆ ಮಾಡುತ್ತವೆ.
ತೀರಾ ಒಣಗಿದಂತೆ ಕಾಣುವ ತ್ವಚೆ ಸರಿಪಡಿಸಲು ಆಲಿವ್ ಆಯಿಲ್ ಬಳಸಬಹುದು. ಇದು ಒಣ ಚರ್ಮಕ್ಕೆ ತೇವಾಂಶ ನೀಡುತ್ತದೆ. ಹೀಗಾಗಿ ನಿತ್ಯ ಇದನ್ನು ಬಳಸಬಹುದು.
ಎಣ್ಣೆಗಳನ್ನು ಬಳಸುವ ವಿಧಾನ:
- ತ್ವಚೆಗೆ ಎಣ್ಣೆಗಳನ್ನು ಹಚ್ಚುವ ಮೊದಲು, ತ್ವಚೆಯನ್ನು ಸ್ವಚ್ಛಗೊಳಿಸಿ.
- ಎಣ್ಣೆಯನ್ನು ಹಚ್ಚಿದ ನಂತರ, ತ್ವಚೆಯನ್ನು ಮಸಾಜ್ ಮಾಡಿ.
- ಎಣ್ಣೆಯನ್ನು ರಾತ್ರಿಯಿಡೀ ತ್ವಚೆಯ ಮೇಲೆ ಬಿಡಿ.
ಎಚ್ಚರಿಕೆಗಳು:
- ಎಣ್ಣೆಗಳನ್ನು ಬಳಸುವ ಮೊದಲು, ನಿಮ್ಮ ತ್ವಚೆಗೆ ಸೂಕ್ತವಾದ ಎಣ್ಣೆಯನ್ನು ಆರಿಸಿ.
- ಎಣ್ಣೆಗಳನ್ನು ಅತಿಯಾಗಿ ಬಳಸಬೇಡಿ.
- ನಿಮ್ಮ ತ್ವಚೆಗೆ ಅಲರ್ಜಿ ಇದ್ದರೆ, ಎಣ್ಣೆಗಳನ್ನು ಬಳಸುವುದನ್ನು ತಪ್ಪಿಸಿ.