alex Certify ನಿಮ್ಮ ಆಭರಣ, ಅಲಂಕಾರದಲ್ಲೂ ಇದೆ ʼಆರೋಗ್ಯʼದ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಆಭರಣ, ಅಲಂಕಾರದಲ್ಲೂ ಇದೆ ʼಆರೋಗ್ಯʼದ ಗುಟ್ಟು

ಆಭರಣಗಳು ಅಥವಾ ಕೆಲವು ಅಲಂಕಾರಗಳು ಕೇವಲ ಸೌಂದರ್ಯ ಹೆಚ್ಚಿಸುತ್ತದೆಂದು ನಾವು ಭಾವಿಸುತ್ತೇವೆ. ಹೀಗೆ ಧರಿಸುವ ಆಭರಣ, ಮಾಡಿಕೊಳ್ಳುವ ಅಲಂಕಾರ ನಮ್ಮ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಸಿಂಧೂರ: ಹಣೆಯ ಮೇಲೆ ಸಿಂಧೂರವಿಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಸುತ್ತಲಿರುವ ಜನರಲ್ಲಿ ಭಾವನಾತ್ಮಕ ಸಂಬಂಧ ಮೂಡುತ್ತದೆ ಮತ್ತು ದೇಹದಲ್ಲಿನ ನೀರಿನ ತೊಂದರೆಯನ್ನು ನಿವಾರಿಸುತ್ತದೆ.

ಕಿವಿಯ ಆಭರಣ: ಕಿವಿಯಲ್ಲಿ ಧರಿಸುವ ಆಭರಣಗಳಿಂದ ಮೂಗು, ಗಂಟಲು, ಕಿವಿಗಳ ಸಮಸ್ಯೆಯನ್ನು ದೂರ ಮಾಡುತ್ತದೆ. ಕಿವಿಯ ಆಭರಣದಿಂದ ಟಾನ್ಸಿಲ್ ತೊಂದರೆಗಳು ದೂರವಾಗುತ್ತವೆ.

ಬಾಜುಬಂದಿ (ಕೈ ತೋಳಿಗೆ ಧರಿಸುವ ಆಭರಣ): ಚಿನ್ನ ಅಥವಾ ಪಂಚಲೋಹದ ಬಾಜುಬಂದಿ ಧರಿಸುವುದರಿಂದ ಹೃದಯದ ಮತ್ತು ಲಿವರ್ ಸಮಸ್ಯೆಗಳು ದೂರವಾಗುತ್ತವೆ. ಇದನ್ನು ಧರಿಸುವುದರಿಂದ ರಕ್ತಸಂಚಾರ ಸರಾಗವಾಗುತ್ತದೆ ಮತ್ತು ಸ್ನಾಯು ಸಂಬಂಧಿ ತೊಂದರೆಗಳು ದೂರವಾಗುತ್ತವೆ.

ಉಂಗುರ: ಉಂಗುರ ಧರಿಸುವುದರಿಂದ ಹಲ್ಲು, ವಸಡು, ಕಿವಿ, ಎದೆ ಮತ್ತು ನಿದ್ರೆಗೆ ಸಂಬಂಧಪಟ್ಟ ತೊಂದರೆಗಳು ನಿವಾರಣೆಯಾಗುತ್ತವೆ.

ಸೊಂಟದ ಪಟ್ಟಿ: ಸೊಂಟದ ಭಾಗದಲ್ಲಿ ಧರಿಸುವ ಈ ಆಭರಣ ಬೆನ್ನಿನ ಮೂಳೆ, ಸೊಂಟ ಹಾಗೂ ಚರ್ಮದ ಆರೋಗ್ಯ ಕಾಪಾಡುತ್ತದೆ. ಪಚನಕ್ರಿಯೆಗೂ ಇದು ಸಹಕಾರಿ.

ಕಾಲುಂಗುರ: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ಸಂಧಿವಾತ ಸಮಸ್ಯೆಗಳು ಇದರಿಂದ ಗುಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...