ದೇಹದಲ್ಲಿರುವ ವಿಷಕಾರಿ ಅಂಶಗಳು ಮೂತ್ರದ ಮೂಲಕ ಹೊರಹೋಗುತ್ತೆ. ಇದೇ ಕಾರಣಕ್ಕೆ ವೈದ್ಯರು ಆದಷ್ಟು ನೀರನ್ನ ಹೆಚ್ಚೆಚ್ಚು ಪ್ರಮಾಣದಲ್ಲಿ ಕುಡೀರಿ ಅಂತಾ ಸಲಹೆ ನೀಡ್ತಾರೆ. ದೇಹಕ್ಕೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ನೀರು ಕುಡಿಯೋದ್ರಿಂದ ಮೂತ್ರದ ಬಣ್ಣ ಸರಿಯಾಗಿ ಇರುತ್ತೆ. ಆದರೆ ನೀರನ್ನ ಕುಡಿಯೋದು ಕಡಿಮೆ ಮಾಡ್ತಿದ್ದಂತೆ ಮೂತ್ರದ ಬಣ್ಣ ಬದಲಾಗುತ್ತಾ ಹೋಗುತ್ತೆ.
ನಿಮ್ಮ ಮೂತ್ರ ಹಳದಿ ಬಣ್ಣಕ್ಕೆ ತಿರುಗಿದೆ ಅಂದ್ರೆ ದೇಹ ನಿರ್ಜಲೀಕರಣದಿಂದ ಬಳಲುತ್ತಿದೆ ಎಂದರ್ಥ. ಕೇವಲ ಇದೊಂದೇ ಅಲ್ಲ. ಇನ್ನೂ ಹಲವು ಬಣ್ಣಕ್ಕೆ ಮೂತ್ರ ತಿರುಗುತ್ತೆ. ಈ ಬಗ್ಗೆ ವಿವರಣೆ ಇಲ್ಲಿದೆ ನೋಡಿ :
ಕೆಂಪು ಅಥವಾ ಗುಲಾಬಿ ಬಣ್ಣ : ನೀವು ಬೀಟ್ರೂಟ್ನ್ನ ಅತಿಯಾಗಿ ಸೇವಿಸಿದ್ರೆ ನಿಮ್ಮ ಮೂತ್ರದ ಬಣ್ಣ ಗುಲಾಬಿ ಇಲ್ಲವೇ ಕೆಂಪು ಬಣ್ಣಕ್ಕೆ ತಿರುಗುತ್ತೆ. ಒಂದು ವೇಳೆ ನೀವು ಬೀಟ್ರೂಟ್ ಸೇವಿಸದೆಯೇ ನಿಮ್ಮ ಮೂತ್ರದ ಬಣ್ಣ ಗುಲಾಬಿ ಇಲ್ಲವೇ ಕೆಂಪಾಗಿದ್ರೆ ನಿಮ್ಮ ಕಿಡ್ನಿಯಲ್ಲಿ ಸೋಂಕು ಉಂಟಾಗಿದೆ ಎಂದರ್ಥ.
ನೀಲಿ ಅಥವಾ ಹಸಿರು : ಮೂತ್ರ ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗೋದು ತುಂಬಾನೇ ಅಪರೂಪ. ಒಂದು ವೇಳೆ ನಿಮ್ಮ ಮೂತ್ರ ಈ ಬಣ್ಣಕ್ಕೆ ತಿರುಗಿದ್ದಲ್ಲಿ ನೀವು ಅಪರೂಪದ ಪೋರ್ಫೈರಿಯಾ ಅಥವಾ ನೀಲಿ ಡಯಾಪರ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ.
ಹಾಲು ಬಿಳಿ ಬಣ್ಣ : ಮೂತ್ರದಲ್ಲಿ 95 ಪ್ರತಿಶತ ನೀರಿದ್ದರೆ ಉಳಿದ 5 ಪ್ರತಿಶತದಲ್ಲಿ ಮಿನರಲ್ಸ್ ಹಾಗೂ ಯುರಿಕ್ ಆಸಿಡ್ ಇರುತ್ತದೆ. ನಿಮ್ಮ ರಕ್ತದ ಬಣ್ಣ ತಿಳಿ ಬಿಳಿ ಬಣ್ಣಕ್ಕೆ ಬಂದಿದ್ದರೆ ದೇಹದಲ್ಲಿ ಕ್ಯಾಲ್ಶಿಯಂ. ಪೋಸ್ಪರಸ್ ಪ್ರಮಾಣ ಹೆಚ್ಚಾಗಿದೆ ಎಂದರ್ಥ. ಈ ಎಲ್ಲಾ ಸಂದರ್ಭಗಳಲ್ಲಿ ವೈದ್ಯರನ್ನ ಸಂಪರ್ಕ ಮಾಡೋದು ಒಳಿತು.