alex Certify ಅಡುಗೆ ಮನೆಯಲ್ಲೇ ಇದೆ ಸೌಂದರ್ಯ ಹೆಚ್ಚಿಸುವ ಗುಟ್ಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಮನೆಯಲ್ಲೇ ಇದೆ ಸೌಂದರ್ಯ ಹೆಚ್ಚಿಸುವ ಗುಟ್ಟು….!

ಎಲ್ಲರಿಗೂ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಸಹಜ. ಆದ್ರೆ ಸೌಂದರ್ಯ ಹೆಚ್ಚಿಸಿಕೊಳ್ಳಲು ದುಬಾರಿ ಉತ್ಪನ್ನಗಳನ್ನು ಬಳಸುವವರೇ ಹೆಚ್ಚು. ಹೊರಗಿನಿಂದ ಮಾತ್ರವಲ್ಲದೆ ಒಳಗಿನಿಂದಲೂ ನಿಮ್ಮ ಸೌಂದರ್ಯ ಹೆಚ್ಚಿಸುವ ಕೆಲವು ಉತ್ಪನ್ನಗಳು ಸುಲಭವಾಗಿ ಸಿಗುತ್ತವೆ. ಅವುಗಳನ್ನು ಬಳಸಿ.

ದುಬಾರಿ ಸೌಂದರ್ಯ ಉತ್ಪನ್ನಗಳು ತಾತ್ಕಾಲಿಕವಾಗಿ ಕಪ್ಪು ಕಲೆಗಳು ಮತ್ತು ಸುಕ್ಕುಗಳನ್ನು ಮರೆಮಾಡಲು ನಿಮಗೆ ಸಹಾಯ ಮಾಡುತ್ತವೆ. ಆದ್ರೆ ದೀರ್ಘಕಾಲೀನ ಪರಿಹಾರ ನೀಡುವ ಈ ಪದಾರ್ಥಗಳು ನಿಮ್ಮ ಅಡುಗೆ ಮನೆಯಲ್ಲೇ ಇವೆ.

ಆಲೂಗಡ್ಡೆ : ವಿಟಮಿನ್ ಬಿ 1, ಬಿ 3, ಬಿ 6, ಮತ್ತು ಸಿ 1 ಸೇರಿದಂತೆ ನಿಮ್ಮ ದೇಹಕ್ಕೆ ಬೇಕಾದ ವಿವಿಧ ಪೋಷಕಾಂಶಗಳನ್ನು ಆಲೂಗಡ್ಡೆ ಹೊಂದಿದೆ. ನಿಮ್ಮ ಚರ್ಮವನ್ನು ಇದು ಸ್ವಚ್ಛಗೊಳಿಸಬಲ್ಲದು. ಅಗತ್ಯವಿರುವ ಹೊಳಪನ್ನು ಸಹ ನೀಡುತ್ತದೆ. ಆಲೂಗಡ್ಡೆ ಮುಖದಲ್ಲಿರುವ ಕಲ್ಮಶವನ್ನು ತೆಗೆದು ಹಾಕುತ್ತದೆ. ಹಾನಿಗೊಳಗಾದ ಚರ್ಮವನ್ನು ಗುಣಪಡಿಸುತ್ತದೆ. ಆಲೂಗಡ್ಡೆಯನ್ನು ತುಂಡಾಗಿ ಕತ್ತರಿಸಿ ನಿಯಮಿತವಾಗಿ ಮುಖಕ್ಕೆ ಉಜ್ಜುತ್ತಾ ಬಂದರೆ ಶೀಘ್ರದಲ್ಲೇ ಫಲಿತಾಂಶಗಳನ್ನು ಪಡೆಯಲು ಸಾಧ್ಯ.

ಜೇನುತುಪ್ಪ: ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಚರ್ಮದ ಮೇಲೆ ಗುಳ್ಳೆಗಳು ಏಳದಂತೆ ತಡೆಗಟ್ಟುತ್ತದೆ. ಚರ್ಮ ಒರಟಾಗಿದ್ದರೆ, ಶುಷ್ಕವಾಗಿದ್ದರೆ ನೀವು ಜೇನುತುಪ್ಪವನ್ನು ಹಚ್ಚಿಕೊಂಡು ನಿಧಾನವಾಗಿ ಮಸಾಜ್ ಮಾಡಿ. ಅದರ ಬ್ಲೀಚಿಂಗ್ ಗುಣವು ಚರ್ಮಕ್ಕೆ ಕಾಂತಿ ನೀಡುತ್ತದೆ.

ಅವೊಕಾಡೊ: ಅವಕಾಡೊ ವಿಟಮಿನ್ ಎ, ಡಿ ಮತ್ತು ಇ ಯನ್ನು ಹೊಂದಿದೆ. ಚರ್ಮದ ಟ್ಯಾನಿಂಗ್ ತೊಡೆದು ಹಾಕಲು ಸಹಾಯ ಮಾಡುತ್ತದೆ. ನೀವು ಆವಕಾಡೊವನ್ನು ಜೇನುತುಪ್ಪ ಮತ್ತು carrier oilನೊಂದಿಗೆ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...