ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು ಯಾವುದೆಂಬುದನ್ನು ತಿಳಿದುಕೊಳ್ಳೋಣ.
*ಚರ್ಮದ ಅಲರ್ಜಿ, ತುರಿಕೆ, ಒಣ ಚರ್ಮದ ಸಮಸ್ಯೆ ಕಾಡುತ್ತಿದ್ದರೆ ಎಕ್ಕ ಗಿಡದ ಬೇರುಗಳನ್ನು ಸುಟ್ಟು ಅದರ ಬೂದಿಗೆ ಸಾಸಿವೆ ಎಣ್ಣೆ ಬೆರೆಸಿ ಅಲರ್ಜಿ, ತುರಿಕೆಗೆ ಹಚ್ಚಿ. ಇದು ಬಹಳ ಬೇಗ ಪರಿಹಾರ ನೀಡುತ್ತದೆ.
*ಮಧುಮೇಹ ಸಮಸ್ಯೆ ಇರುವವರು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಇದನ್ನು ಬಳಸಬಹುದು. ಇದರ ಎಲೆಗಳನ್ನು ತೆಗೆದುಕೊಂಡು ಕಾಲುಗಳ ಕೆಳಗೆ ಇರಿಸಿ ಸಾಕ್ಸ್ ಧರಿಸಿ. ಇದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.
*ದೇಹದಲ್ಲಾದ ನೋವು ಮತ್ತು ಗಾಯಗಳನ್ನು ವಾಸಿ ಮಾಡಲು ಇದನ್ನು ಬಳಸಬಹುದು. ಪೀಡಿತ ಪ್ರದೇಶಕ್ಕೆ ಎಣ್ಣೆ ಹಚ್ಚಿ ಅದರ ಮೇಲೆ ಇದರ ಎಲೆಗಳನ್ನು ಬಿಸಿ ಮಾಡಿ ಇಡಿ. ಇದರಿಂದ ನೋವು ವಾಸಿಯಾಗುತ್ತದೆ. ಹಾಗೇ ಗಾಯವಾದಾಗ ಈ ಎಲೆಯ ರಸವನ್ನು ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ ಮತ್ತು ಗಾಯ ಬೇಗ ವಾಸಿಯಾಗುತ್ತದೆ.