ಉದ್ದಿನ ಬೇಳೆ ಅಂದಾಕ್ಷಣ ಇಡ್ಲಿ, ದೋಸೆ, ವಡೆ ನೆನಪಾಗುವುದು ಸಹಜ. ಅದರ ಹೊರತು ಉದ್ದಿನ ಬೇಳೆಯನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದು ನಿಮಗೇ ಗೊತ್ತೇ?
ಒಂದು ಕಪ್ ಉದ್ದಿನ ಬೇಳೆಯನ್ನು ರಾತ್ರಿ ನೆನೆಸಿ ಬೆಳಗ್ಗೆ ರುಬ್ಬಿ ಪೇಸ್ಟ್ ತಯಾರಿಸಿ. ಇದಕ್ಕೆ ಎರಡು ಚಮಚ ಹಾಲು ಮತ್ತು ತುಪ್ಪ ಸೇರಿಸಿ ಮುಖಕ್ಕೆ ಹಚ್ಚಿ. ಮೂವತ್ತು ನಿಮಿಷ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ವಾರಕ್ಕೆ ಮೂರು ಬಾರಿ ಹೀಗೆ ಮಾಡಿದರೆ ಮುಖದ ಮೇಲಿನ ಸತ್ತ ಜೀವಕೋಶಗಳು ನಾಶವಾಗುತ್ತವೆ. ಬಿಸಿಲಿನಿಂದ ಉಂಟಾದ ಕಲೆ ನಿವಾರಣೆಗೆ ಉದ್ದನ್ನು ರುಬ್ಬುವಾಗ ಒಂದು ಕಪ್ ಮೊಸರು ಸೇರಿಸಿ. ಕುತ್ತಿಗೆಯ ಭಾಗಕ್ಕೆ ಹಚ್ಚಿ. 15 ನಿಮಿಷ ಬಳಿಕ ತೊಳೆಯಿರಿ.
ಎರಡು ದಿನಕ್ಕೊಮ್ಮೆ ಹೀಗೆ ಮಾಡಿದರೆ ಮುಖದ ಕಲೆಗಳು ಸಂಪೂರ್ಣವಾಗಿ ದೂರವಾಗುತ್ತವೆ. ಮೊಡವೆ ನಿವಾರಣೆಗೆ ರುಬ್ಬುವ ವೇಳೆ ಗ್ಲಿಸರಿನ್, ಬಾದಾಮಿ ಎಣ್ಣೆ ಹಾಗೂ ರೋಸ್ ವಾಟರ್ ಸೇರಿಸಿ. ಇಪ್ಪತ್ತು ನಿಮಿಷದ ಬಳಿಕ ಮುಖ ತೊಳೆದರೆ ಸಾಕು.