ಹೂವುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಇವು ನಿಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸಲು ಮಾತ್ರವಲ್ಲ, ತ್ವಚೆಯ ಬ್ಯೂಟಿಯನ್ನೂ ಹೆಚ್ಚಿಸುತ್ತವೆ. ಹೇಗೆಂದಿರಾ?
ಮಲ್ಲಿಗೆಯ ಎಣ್ಣೆಯನ್ನು ತಲೆಗೆ ಹಾಕಿಕೊಳ್ಳುವುದರಿಂದ ಕೂದಲು ನಯವಾಗುತ್ತದೆ. ಮತ್ತು ತಲೆಯ ಸೋಂಕು ಅಥವಾ ಹೊಟ್ಟು ದೂರವಾಗುತ್ತವೆ.
ಚೆಂಡು ಹೂವು ತ್ವಚೆಯಲ್ಲಿ ಮೂಡಿರುವ ಮೊಡವೆಯನ್ನು ದೂರ ಮಾಡುತ್ತೆ. ತ್ವಚೆಗೆ ಮಾಯಿಸ್ಚರೈಸರ್ ಆಗಿ ಕೆಲಸ ಮಾಡುವ ಇವು ರಕ್ತಸಂಚಾರವನ್ನು ಚುರುಕುಗೊಳಿಸಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತವೆ.
ಗುಲಾಬಿ ಹೂವು ತ್ವಚೆಯನ್ನು ನಯಗೊಳಿಸುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮೊಡವೆ ಬರದಂತೆ ನೋಡಿಕೊಳ್ಳುತ್ತವೆ ಮಾತ್ರವಲ್ಲ ಕಲೆಯನ್ನೂ ದೂರಮಾಡುತ್ತದೆ. ದಾಸವಾಳ ಹೂವು ಕೂದಲು ಉದ್ದ ಬೆಳೆಯುವಂತೆ ಹಾಗೂ ಉದುರದಂತೆ ನೋಡಿಕೊಳ್ಳುತ್ತದೆ.