
ಒಣಹಣ್ಣುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಒಣಹಣ್ಣುಗಳಿಂದ ನಿಮ್ಮ ಸೌಂದರ್ಯವನ್ನೂ ಕಾಪಾಡಬಹುದು ಎಂಬುದು ನಿಮಗೆ ತಿಳಿದಿದೆಯೇ.
ನೀವು ಸಣ್ಣ ವಯಸ್ಸಿನವರಾಗಿದ್ದೂ ಮುಖದ ಮೇಲೆ ಸುಕ್ಕು ಹಾಗೂ ನೆರಿಗೆಗಳು ಮೂಡಿವೆಯೇ. ಹಾಗಿದ್ದರೆ ಅದರ ನಿವಾರಣೆಗೆ ರಾತ್ರಿ ಮಲಗುವ ಮುನ್ನ ನಾಲ್ಕಾರು ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಇದನ್ನು ರುಬ್ಬಿ ಪೇಸ್ಟ್ ತಯಾರಿಸಿ.
ಈ ಪೇಸ್ಟ್ ಮುಖಕ್ಕೆ ದಪ್ಪನಾಗಿ ಹಚ್ಚಿ. ಕೈ ಬೆರಳುಗಳಿಂದ ಹದಿನೈದು ನಿಮಿಷ ಮಸಾಜ್ ಮಾಡಿ. ಒಣಗಿದ ಬಳಿಕ ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
ಒಣದ್ರಾಕ್ಷಿಗಳನ್ನು ಜಜ್ಜಿ ಎರಡು ಚಮಚ ದಪ್ಪಗಿನ ಹಸಿ ಹಾಲು ಸೇರಿಸಿ ಪೇಸ್ಟ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಕುತ್ತಿಗೆಯ ಭಾಗಕ್ಕೂ ಇದನ್ನು ಲೇಪಿಸಿಕೊಳ್ಳಿ. ಹದಿನೈದು ನಿಮಿಷಗಳ ಬಳಿಕ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ. ನಿಮ್ಮ ಮುಖಕ್ಕೆ ವಿಶೇಷ ಹೊಳಪು ಬರುವುದನ್ನು ನೀವೂ ಕಂಡುಕೊಳ್ಳಿ.