alex Certify ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ; ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡೀ ಗ್ರಾಮವನ್ನೇ ನುಂಗಿ ಹಾಕಿದೆ ಸಮುದ್ರ; ಈ ಬಾರಿ ಮೂರು ಕಡೆಗಳಲ್ಲಿ ಮಾಡಬೇಕಿದೆ ಮತದಾನ….!

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆಯಲಿದೆ. ಚುನಾವಣಾ ವಾತಾವರಣದ ನಡುವೆಯೇ ಒಡಿಶಾದ ಪೊಡಂಪೇಟ ಗ್ರಾಮದ ಮತದಾರರು ಪರದಾಡುವಂತಾಗಿದೆ. ಅವರ ಹಳ್ಳಿಯೇ ಈಗ ಚರ್ಚೆಯ ವಿಷಯವಾಗಿಬಿಟ್ಟಿದೆ.

ಜುಲೈ 2011 ರಲ್ಲಿ ಸಮುದ್ರದ ಭಯಾನಕ ಉಬ್ಬರವಿಳಿತ ಇಲ್ಲಿನ ಮನೆಗಳನ್ನು ನಾಶಮಾಡಿತು. ಮೀನುಗಾರಿಕೆಯನ್ನೇ ನಂಬಿ  ಬದುಕುತ್ತಿರುವ ಪೊಡಂಪೇಟ ಗ್ರಾಮಸ್ಥರು ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಏಕೆಂದರೆ ಇಡೀ ಗ್ರಾಮ ನಾಶವಾಗಿರುವುದು ಮಾತ್ರವಲ್ಲ, 13 ವರ್ಷ ಕಳೆದರೂ ಇಲ್ಲಿ ಭೂ ಕುಸಿತ ಮುಂದುವರಿದಿದೆ.

ಸಮುದ್ರದ ಅಲೆಗಳ ಅಬ್ಬರದಿಂದಾಗಿ ಗ್ರಾಮದಲ್ಲಿ ವಾಸಿಸುವುದೇ  ಕಷ್ಟಕರವಾಗಿದೆ. ಜೀವಕ್ಕೇ ಅಪಾಯ ಎದುರಾದಾಗ ಸರ್ಕಾರ, ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲು ಪ್ರಾರಂಭಿಸಿತು. ಚುನಾವಣೆ ಬಂದಾಗಲೆಲ್ಲ ಹಳೆ ಪೊಡಂಪೇಟ ಗ್ರಾಮದ ಬಳಿ ಮತಗಟ್ಟೆ ನಿರ್ಮಿಸಲಾಗುತ್ತಿತ್ತು. ಆದರೆ ಈ ಬಾರಿ ವ್ಯವಸ್ಥೆ ಬದಲಾಗಿದೆ. ಪೊಡಂಪೇಟ ಗ್ರಾಮದ ಮತದಾರರು ಮೂರು ಕಡೆಗಳಲ್ಲಿ ಮತದಾನ ಮಾಡಲಿದ್ದಾರೆ.

ಪೊಡಂಪೇಟ ಗ್ರಾಮವು ಗಂಜಾಂ ಜಿಲ್ಲೆಯಲ್ಲಿದೆ. ರಾಜಧಾನಿ ಭುವನೇಶ್ವರದಿಂದ ಸುಮಾರು 140 ಕಿಲೋಮೀಟರ್ ದೂರದಲ್ಲಿ. ಭೂಕುಸಿತದ ನಂತರ 2011–12ರಲ್ಲಿ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಪೊಡಗಡ ಗ್ರಾಮದಲ್ಲಿ 102 ಗ್ರಾಮಸ್ಥರು ಪುನರ್ವಸತಿ ಹೊಂದಿದ್ದರು. ಈಗ ಅದನ್ನು ಹೊಸ ಪೊಡಂಪೇಟ ಎಂದು ಕರೆಯುತ್ತಾರೆ. ಆದರೆ ಈಗಲೂ ಕುಡಿಯುವ ನೀರು, ರಸ್ತೆ ಮತ್ತು ಸ್ಮಶಾನದಂತಹ ಪ್ರತಿಯೊಂದು ಮೂಲಭೂತ ಅಗತ್ಯಗಳಿಗಾಗಿ ಇವರು ಹೋರಾಡುತ್ತಿದ್ದಾರೆ. 2013 ರಲ್ಲಿ ಫೈಲಿನ್ ಚಂಡಮಾರುತದ ನಂತರ  ಗ್ರಾಮದ ಉಳಿದ 361 ಕುಟುಂಬಗಳನ್ನು ಮಯೂರ್ಪಾದ ಗ್ರಾಮದ ಬಳಿ ಪುನರ್ವಸತಿ ಮಾಡಲಾಯಿತು.

ಈ ಬಾರಿ ಹೊಸ ಪೊಡಂಪೇಟೆಯಲ್ಲಿ ಮತಗಟ್ಟೆ ಇಲ್ಲ. ಚುನಾವಣಾ ಆಯೋಗದ ಪ್ರಕಾರ ಹೊಸ ಪೊಡಂಪೇಟದ 220ಕ್ಕೂ ಹೆಚ್ಚು ಮತದಾರರು ಅರುಣಪುರ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಲಿದ್ದಾರೆ. ಈ ಸ್ಥಳವು ಗ್ರಾಮದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿದೆ. ಕೆಲವು ಮತದಾರರು ಮತ ಚಲಾಯಿಸಲು ಮಯೂರ್‌ಪಾಡಾಗೆ ಹೋಗಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...