alex Certify ʼThe Sabarmati Reportʼ ಚಿತ್ರಕ್ಕೆ ʼತೆರಿಗೆ ವಿನಾಯಿತಿʼ ಘೋಷಿಸಿದ ಮಧ್ಯಪ್ರದೇಶ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼThe Sabarmati Reportʼ ಚಿತ್ರಕ್ಕೆ ʼತೆರಿಗೆ ವಿನಾಯಿತಿʼ ಘೋಷಿಸಿದ ಮಧ್ಯಪ್ರದೇಶ ಸರ್ಕಾರ

The Sabarmati Report review: Vikrant Massey, Ridhi Dogra's performances the  only saving grace in this confused film - India Today2002 ರ ಗೋಧ್ರಾ ರೈಲು ದಹನ ಘಟನೆಯನ್ನು ಆಧರಿಸಿದ ‘ ದಿ ಸಬರಮತಿ ರಿಪೋರ್ಟ್ ‘ ಚಲನಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಾಗುವುದು ಎಂದು ಮಧ್ಯಪ್ರದೇಶ ಸರ್ಕಾರ ಮಂಗಳವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್‌, ಈ ಸುದ್ದಿಯನ್ನು ಹಂಚಿಕೊಂಡಿದ್ದಾರಲ್ಲದೇ ಚಿತ್ರವನ್ನು ವೀಕ್ಷಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ.

ಫೆಬ್ರವರಿ 27, 2002 ರಂದು, ಗುಜರಾತ್‌ನ ಗೋಧ್ರಾ ನಿಲ್ದಾಣದ ಸಮೀಪ ಸಬರಮತಿ ಎಕ್ಸ್‌ಪ್ರೆಸ್‌ನ S-6 ಕೋಚ್‌ಗೆ ಬೆಂಕಿ ಹಚ್ಚಿ, ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ 59 ಯಾತ್ರಾರ್ಥಿಗಳನ್ನು ಕೊಂದ ದುರಂತ ಘಟನೆಯು ಚಿತ್ರದ ಮುಖ್ಯ ವಿಷಯವಾಗಿದೆ. ಈ ಘಟನೆಯ ಪರಿಣಾಮವಾಗಿ ಆ ವರ್ಷ ಗುಜರಾತ್‌ನಲ್ಲಿ ಸರಣಿ ಹಿಂಸಾತ್ಮಕ ಗಲಭೆಗಳು ಭುಗಿಲೆದ್ದಿದ್ದವು.

ಸುದ್ದಿಗಾರರೊಂದಿಗೆ ಮಾತನಾಡಿದ ಯಾದವ್, “‘ ಸಬರಮತಿ ರಿಪೋರ್ಟ್ ‘ ತುಂಬಾ ಒಳ್ಳೆಯ ಸಿನಿಮಾ. ನಾನೇ ಸಿನಿಮಾ ನೋಡಲು ಹೋಗುತ್ತೇನೆ. ನನ್ನ ಸಚಿವರು, ಶಾಸಕರು, ಸಂಸದರಿಗೂ ಈ ಚಿತ್ರ ನೋಡುವಂತೆ ಹೇಳುತ್ತೇನೆ. ನಾವು ಇದನ್ನು ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸಲಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ವೀಕ್ಷಿಸಬಹುದು ಎಂದರು.

ಸಾರ್ವಜನಿಕರಿಗೆ ಸತ್ಯವನ್ನು ಹೇಳಿದ್ದಕ್ಕಾಗಿ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಲನಚಿತ್ರವನ್ನು ಶ್ಲಾಘಿಸಿದ್ದಾರೆ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸತ್ಯವನ್ನು ಬಹಿರಂಗಪಡಿಸುವುದು ಪ್ರಯೋಜನಕಾರಿ ಎಂದು ಅವರು ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೂ ಮುನ್ನ ಗೃಹ ಸಚಿವ ಅಮಿತ್ ಶಾ ಚಿತ್ರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದರು.

ವಿಕ್ರಾಂತ್ ಮಾಸ್ಸೆ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ನಟಿಸಿರುವ ʼದಿ ಸಬರಮತಿ ರಿಪೋರ್ಟ್‌ʼ ಚಿತ್ರವನ್ನು ಎ ವಿಕಿರ್ ಫಿಲ್ಮ್ಸ್ ಪ್ರಸ್ತುತಪಡಿಸಿದೆ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್‌ನ ಒಂದು ಅಂಗವಾದ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಿಸಿದೆ. ಚಿತ್ರವನ್ನು ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ ಮತ್ತು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಿಸಿದ್ದಾರೆ.

ಶುಕ್ರವಾರದಂದು 1.69 ಕೋಟಿ ರೂಪಾಯಿಗಳೊಂದಿಗೆ ತೆರೆಕಂಡ ಈ ಚಿತ್ರ ಶನಿವಾರದಂದು 2.62 ಕೋಟಿ ರೂಪಾಯಿ ಗಳಿಸಿದೆ. ಭಾನುವಾರದಂದು 3.74 ಕೋಟಿ ರೂ.ಗಳನ್ನು ಗಳಿಸಿದ್ದು, 44% ಹೆಚ್ಚಳವಾಗಿದೆ.

— Narendra Modi (@narendramodi) November 17, 2024

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...