alex Certify ಬದಲಾಗಿದೆ ಬಾಡಿಗೆ ತಾಯ್ತನ ಮತ್ತು ಹೆರಿಗೆ ರಜೆಯ ನಿಯಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬದಲಾಗಿದೆ ಬಾಡಿಗೆ ತಾಯ್ತನ ಮತ್ತು ಹೆರಿಗೆ ರಜೆಯ ನಿಯಮ…!

ಭಾರತ ಸರ್ಕಾರ ಇತ್ತೀಚೆಗಷ್ಟೆ ಕೇಂದ್ರ ನಾಗರಿಕ ಸೇವೆಗಳ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಇವುಗಳಿಗೆ ಕೇಂದ್ರ ನಾಗರಿಕ ಸೇವೆಗಳು (ರಜೆ) (ತಿದ್ದುಪಡಿ) ನಿಯಮಗಳು 2024 ಎಂದು ಹೆಸರಿಡಲಾಗಿದೆ. ಬಾಡಿಗೆ ತಾಯ್ತನ ಹಾಗೂ ಹೆರಿಗೆ ರಜೆಯ ನಿಯಮಗಳು ಬದಲಾಗಿವೆ. ತಾಯ್ತನವನ್ನು ಬಾಡಿಗೆಗೆ ಪಡೆದವರು  ಹಾಗೆಯೇ ಎರಡು ಮಕ್ಕಳಿಗಿಂತ ಕಡಿಮೆ ಮಕ್ಕಳನ್ನು ಹೊಂದಿರುವ ತಾಯಿಗೆ 180 ದಿನಗಳ ಹೆರಿಗೆ ರಜೆಯನ್ನು ನೀಡಬಹುದು ಎಂದು ನಿಯಮದಲ್ಲಿ ಹೇಳಲಾಗಿದೆ. ಇಬ್ಬರೂ ಸರ್ಕಾರಿ ನೌಕರರಾಗಿದ್ದರೂ ಈ ನಿಯಮ ಅನ್ವಯವಾಗುತ್ತದೆ, ಅಥವಾ ಒಬ್ಬರು ಸರ್ಕಾರಿ ನೌಕರರಾಗಿದ್ದರೆ ಸಹ ಇದು ಅನ್ವಯವಾಗಿತ್ತದೆ.

ಬಾಡಿಗೆ ತಾಯ್ತನದ ಸಂದರ್ಭದಲ್ಲಿ ತಂದೆ ಮತ್ತು ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ ಕೇಂದ್ರ ನೌಕರನು ಮಗುವಿನ ಜನನದ ಆರು ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆಯನ್ನು ಪಡೆಯಲು ಅರ್ಹನಾಗಿರುತ್ತಾನೆ. ಅಧಿಕೃತ ಗೆಜೆಟ್‌ನಲ್ಲಿ ನಿಯಮಗಳನ್ನು ಪ್ರಕಟಿಸಿದ ದಿನಾಂಕ ಜೂನ್ 18 ರಿಂದಲೇ ಹೊಸ ನಿಯಮಗಳು ಜಾರಿಗೆ ಬಂದಿವೆ.

ಈ ಕುರಿತಂತೆ ಕೇಂದ್ರ ಸರ್ಕಾರ ಸುತ್ತೋಲೆಯನ್ನೂ ಹೊರಡಿಸಿದೆ. ” ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡುವ ತಾಯಿ ಮತ್ತು ಆ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಪೋಷಕರದ್ದು ಬಹು ದೊಡ್ಡ ನಿರ್ಧಾರ. ಈಗ ಬಾಡಿಗೆ ತಾಯ್ತನದ ಪ್ರಕರಣಗಳಲ್ಲಿ, ಬಾಡಿಗೆದಾರರು, ಕೇಂದ್ರ ಸರ್ಕಾರಿ ಉದ್ಯೋಗಿಗಳಾಗಿದ್ದಲ್ಲಿ 180 ದಿನಗಳ ಹೆರಿಗೆ ರಜೆಯನ್ನು ಪಡೆಯಬಹುದು. ಬಾಡಿಗೆದಾರರ ಜೊತೆಗೆ ತಾಯಿ, ಅಂದರೆ ಎರಡು ಜೀವಂತ ಮಕ್ಕಳನ್ನು ಹೊಂದಿರುವ ತಾಯಿ ಸಹ ಸರ್ಕಾರಿ ಉದ್ಯೋಗಿಯಾಗಿದ್ದರೆ 180 ದಿನಗಳ ಹೆರಿಗೆ ರಜೆಯನ್ನು ಸಹ ಪಡೆಯುತ್ತಾರೆ. ಇದಕ್ಕಾಗಿ ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು, 1972 ಅನ್ನು ತಿದ್ದುಪಡಿ ಮಾಡಲಾಗಿದೆ, ಇದು ಕೇಂದ್ರ ನೌಕರರಿಗೆ ಪ್ರಯೋಜನಕಾರಿಯಾಗಲಿದೆ.

ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ, ಬಾಡಿಗೆ ತಾಯ್ತನಕ್ಕಾಗಿ ನಿಯೋಜಿಸಿರುವ ತಾಯಿ ಕೂಡ ಮಕ್ಕಳ ಆರೈಕೆ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಇದರೊಂದಿಗೆ ಬಾಡಿಗೆ ತಾಯ್ತನದಲ್ಲಿ ಪಿತೃತ್ವ ರಜೆ ಬಗ್ಗೆಯೂ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಎರಡಕ್ಕಿಂತ ಕಡಿಮೆ ಜೀವಂತ ಮಕ್ಕಳನ್ನು ಹೊಂದಿರುವ ಕೇಂದ್ರದ ಉದ್ಯೋಗಿ ತಂದೆ ಮಗುವಿನ ಜನನದ ಆರು ತಿಂಗಳೊಳಗೆ 15 ದಿನಗಳ ಪಿತೃತ್ವ ರಜೆಯನ್ನು ಪಡೆಯಲು ಅರ್ಹರಾಗಿರುತ್ತಾರೆʼʼ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...