ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ ಇನ್ನೊಬ್ಬರ ಕೂದಲಿಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ ನಿಮ್ಮ ಕೂದಲಿಗೆ ಯಾವುದು ಸರಿ ಹೊಂದುತ್ತದೆ ಎಂಬುದನ್ನು ತಿಳಿದು ಬಳಸಿ.
*ನಿಮಗೆ ಕೂದಲು ನಯವಾಗಿ ಹೊಳೆಯಲು ನೈಸರ್ಗಿಕ ಪದಾರ್ಥಗಳಾದ ಅರ್ಗಾನ್ ಆಯಿಲ್, ಜೋಜೋಬಾ ಆಯಿಲ್ ಒಳ್ಳೆಯದು. ಇದು ನೆತ್ತಿಯ ಚರ್ಮವನ್ನು ಹೃಡ್ರೇಟ್ ಮಾಡುತ್ತದೆ.
*ನೀವು ಕೂದಲುದುರುವಿಕೆಯಿಂದ ಬಳಲುತ್ತಿದ್ದರೆ ಮಿನೋಕ್ವಿಡಿಲ್ ನಿಯಾಸಿನ್ ಅಥವಾ ಫೈಟೊ ಕೆಫೀನ್ ನಂತಹ ಪದಾರ್ಥಗಳಿರುವ ಶಾಂಪುವನ್ನು ಆರಿಸಿ.
*ಅಲೆಅಲೆಯಾಗಿ, ಬೌನ್ಸಿಯಾಗಿರುವ ಕೂದಲನ್ನು ಪಡೆಯಲು ಗ್ಲಿಸರಿನ್ ಅಥವಾ ಬೆಣ್ಣೆಯನ್ನು ಒಳಗೊಂಡಿರುವ ಶಾಂಪೂವನ್ನು ಬಳಸಿ.
*ನಿಮಗೆ ನೇರ ಕೂದಲನ್ನು ಪಡೆಯಲು ಕೆರಾಟಿನ್, ಪ್ರೋಟೀನ್ ಗಳು ಅಥವಾ ವಿಟಮಿನ್ ಬಿ, ಸಿ, ಮತ್ತು ಇ ಹೊಂದಿರುವ ಶಾಂಪೂ ಬಳಸಿ.
*ಉತ್ತಮ ಕಲರಿಂಗ್ ಕೂದಲನ್ನು ಪಡೆಯಲು ಗ್ಲಿಸರಿನ್ ಅಥವಾ ಎಸೆನ್ಷಿಯಲ್ ಆಯಿಲ್ ಇರುವ ಶಾಂಪೂವನ್ನು ಬಳಸಿ.
*ತಲೆಹೊಟ್ಟು ನಿವಾರಣೆಯಾಗಲು ಆ್ಯಂಟಿ ಫಂಗಲ್ ಅಂಶವಿರುವ ಶಾಂಪೂವನ್ನು ಬಳಸಿ.