alex Certify ಪ್ರಾಣಿಗಳ ಸ್ನೇಹಕ್ಕೆ ಮೂಕವಿಸ್ಮಿತರಾದ ಜನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿಗಳ ಸ್ನೇಹಕ್ಕೆ ಮೂಕವಿಸ್ಮಿತರಾದ ಜನ….!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ಕೆಲ ವಿಡಿಯೋಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳಂತೂ ನೋಡೋಕೆ ಎರಡು ಕಣ್ಣು ಸಾಲದು ಎಂಬಂತೆ ಇರುತ್ತದೆ.

ಇದೇ ಸಾಲಿಗೆ ಇದೀಗ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದ್ದು ರೆಡಿಟ್​​ನಲ್ಲಿ ಸಖತ್​ ಸೌಂಡ್​ ಮಾಡ್ತಿದೆ.

21ಸೆಕೆಂಡ್​ಗಳ ವಿಡಿಯೋ ಇದಾಗಿದ್ದು ಇದರಲ್ಲಿ ಮನೆಯಿಂದ ಹೊರಗೆ ಹೋದ ಬೆಕ್ಕು ವಾಪಸ್ಸಾಗುವಾಗ ಏಕೆ ಒದ್ದೆಯಾಗಿ ಇರ್ತಿತ್ತು ಅನ್ನೋದು ಮಾಲೀಕನ ತಲೆ ಕೆಡಿಸಿತ್ತು.

ಆದರೆ ಸರಿಯಾಗಿ ವೀಕ್ಷಣೆ ಮಾಡಿದ ವೇಳೆ ಜಿಂಕೆಯೊಂದು ಈ ಬೆಕ್ಕನ್ನ ನೆಕ್ಕಿ ನೆಕ್ಕಿ ಪ್ರೀತಿ ಮಾಡುತ್ತೆ ಅನ್ನೋದು ತಿಳಿದು ಬಂದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೂಕ ಪ್ರಾಣಿಗಳ ಸ್ನೇಹಕ್ಕೆ ಫಿದಾ ಆಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...