ಜಾತಕದಲ್ಲಿರುವ ಗ್ರಹಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ನಮ್ಮ ಅಭ್ಯಾಸಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಜಾತಕದಲ್ಲಿರುವ ಗ್ರಹ ದೋಷ, ನಮ್ಮ ಅಭ್ಯಾಸದಿಂದ ಶುಭ-ಅಶುಭ ಫಲಗಳನ್ನು ಹೆಚ್ಚು-ಕಡಿಮೆ ಮಾಡುತ್ತದೆ. ನಮ್ಮ ನಡಿಗೆ ಕೂಡ ಗ್ರಹಗಳ ಮೇಲೆ ಪರಿಣಾಮ ಬೀರುತ್ತದೆ. ಶನಿ-ರಾಹು ಪ್ರಭಾವವನ್ನು ಹೆಚ್ಚಿಸುತ್ತದೆ.
ಆಹಾರ ಸೇವನೆ ನಂತ್ರ ಪಾತ್ರೆಗಳನ್ನು ಅಲ್ಲಿಯೇ ಬಿಡುವುದ್ರಿಂದ ಶನಿ ಹಾಗೂ ಚಂದ್ರನ ಪ್ರಭಾವಕ್ಕೊಳಗಾಗಬೇಕಾಗುತ್ತದೆ. ಕಷ್ಟಪಟ್ಟು ಕೆಲಸ ಮಾಡಿದ್ರೂ ಕಡಿಮೆ ಫಲಿತಾಂಶ ಬರುತ್ತದೆ. ಕೊಳಕು ಅಡಿಗೆಮನೆ ಮಂಗಳನ ಕೋಪಕ್ಕೆ ಕಾರಣವಾಗುತ್ತದೆ.
ಕೊಳಕು ಬಾತ್ ರೂಮ್ ವಾಸ್ತು ದೋಷವನ್ನು ಹೆಚ್ಚಿಸುತ್ತದೆ. ಸ್ನಾನ ಮಾಡಿದ ನಂತ್ರ ಬಾತ್ ರೂಮ್ ಕೊಳಕಾಗಿಡುವವರ ಮೇಲೆ ಚಂದ್ರ ಪ್ರಭಾವ ಬೀರುತ್ತಾನೆ.
ಪಾದಗಳನ್ನು ಎಳೆಯುತ್ತ ನಡೆಯುವುದು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ. ಅದ್ರ ಜೊತೆಗೆ ರಾಹು ಮತ್ತು ಶನಿ ದೋಷಕ್ಕೆ ಕಾರಣವಾಗುತ್ತದೆ.
ದೇವರ ಮನೆಯನ್ನು ಪ್ರತಿ ದಿನ ಸ್ವಚ್ಛಗೊಳಿಸಬೇಕು. ಇಲ್ಲವಾದ್ರೆ ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ.
ಯಾವುದೇ ಕಾರಣವಿಲ್ಲದೆ ತಡರಾತ್ರಿಯವರೆಗೆ ಎಚ್ಚರವಿದ್ದರೆ ಚಂದ್ರ ಪ್ರಭಾವವುಂಟಾಗುತ್ತದೆ. ಒತ್ತಡ ಅಥವಾ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.