ಎಂಟಿವಿ ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಅನ್ನು ಗಾಯಕಿ ಲಿಸಾ ಗೆದ್ದುಕೊಂಡಿದ್ದಾರೆ. ಮೊದಲ ಸೋಲೋ ಕೆ-ಪಾಪ್ ಗಾಯಕಿಯಾಗಿರುವ ಲಿಸಾ, ಎಂಟಿವಿ ಯುರೋಪ್ ಮ್ಯೂಸಿಕ್ ಅವಾರ್ಡ್ ಗೆದ್ದ ಮೊದಲ ಸೋಲೋ ಕೆ-ಪಾಪ್ ವಿಜೇತೆ ಎನಿಸಿಕೊಂಡಿದ್ದಾರೆ. 2019ರಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಸೋಲೊ ಕೆ-ಪಾಪ್ಗೆ ನೀಡಲಾಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಕೂಡ ಇದನ್ನು ದೃಢಪಡಿಸಿದ್ದು, ಲಿಸಾ ಈಗ ವಿಶ್ವ ದಾಖಲೆ ಬರೆದಿದ್ದಾರೆ. ಎಂಟಿವಿ ಮ್ಯೂಸಿಕ್ ಅವಾರ್ಡ್ ಪಡೆದ ಮೊದಲಿಗಳಾಗಿ ಮಿಂಚಿದ್ದಾಳೆ ಲಿಸಾ.
ಇದರ ಜೊತೆ, ಈಕೆಯ ಬ್ಲ್ಯಾಕ್‌ಪಿಂಕ್ ಮ್ಯೂಸಿಕ್ ಅತ್ಯುತ್ತಮ ಮೆಟಾವರ್ಸ್ ಪರ್ಫಾರ್ಮೆನ್ಸ್‌ಗಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಜೊತೆಗೆ ಲಿಸಾ ಅವರ “ರೆಡಿ ಫಾರ್ ಲವ್”ನ ಅಭಿನಯಕ್ಕಾಗಿ ಪ್ರಶಸ್ತಿ ಸಿಕ್ಕಿದೆ. ಎಂಟಿವಿ ಪ್ರಶಸ್ತಿ ಗಳಿಸಿರುವ ಲಿಸಾ ಸದ್ಯ ತಮ್ಮ ಇನ್ಸ್ಟಾಗ್ರಾಮ್ನಲ್ಲಿ 86.3 ಮಿಲಿಯನ್ ಅನುಯಾಯಿಗಳನ್ನುಹೊಂದಿದ್ದಾರೆ. ಇದರಲ್ಲಿಯೂ ಈಕೆಯೇ ಮುಂದು. ಇನ್ಸ್ಟಾಗ್ರಾಮ್ನಲ್ಲಿ ಅತಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವಾಕೆ ಎಂಬ ಹೆಗ್ಗಳಿಕೆ ಕೂಡ ಈಕೆಗಿದೆ.
ಥೈಲ್ಯಾಂಡ್‌ನ ಬುರಿರಾಮ್‌ನಲ್ಲಿ ಜನಿಸಿದ ಲಿಸಾ 2011 ರಲ್ಲಿ ದಕ್ಷಿಣ ಕೊರಿಯಾಕ್ಕೆ ತೆರಳಿದರು. ಜೆನ್ನಿ, ರೋಸ್ ಮತ್ತು ಜಿಸೂ ಅವರ ಆಲ್ಬಂಗಳು. 2016 ರಲ್ಲಿ ಬ್ಲ್ಯಾಕ್‌ಪಿಂಕ್ ಎಂಬ ಆಲ್ಬಂ ರಚಿಸಿ ವಿಶ್ವಖ್ಯಾತಿ ಗಳಿಸಿದಳು.