ಅನ್ನ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ಅಕ್ಕಿಯಿಂದ್ಲೇ ನಾವು ಹತ್ತಾರು ಬಗೆಯ ತಿನಿಸುಗಳನ್ನು ಮಾಡಿ ತಿನ್ನುತ್ತೇವೆ. ಭಾರತದಲ್ಲಂತೂ ಅಕ್ಕಿ ಅತ್ಯಂತ ಪ್ರಮುಖ ಆಹಾರವಾಗಿದೆ. ಆದ್ರೆ ಅಕ್ಕಿಯನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿಟ್ಟುಕೊಂಡರೆ ಅದರಲ್ಲಿ ಹುಳಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಹುಳಗಳು ಜಾಸ್ತಿಯಾದ್ರೆ ಅಕ್ಕಿಯೇ ವೇಸ್ಟ್ ಆಗಬಹುದು. ಅದನ್ನು ಬಳಸುವುದಂತೂ ಸಾಧ್ಯವಿಲ್ಲ.
ಹುಳುಗಳು ಆಗದಂತೆ ಬಹಳ ದಿನ ಅಕ್ಕಿಯನ್ನು ಹೇಗೆ ಸಂಗ್ರಹಿಸಬಹುದು ಅನ್ನೋದನ್ನು ನೋಡೋಣ. ಅಕ್ಕಿಯಲ್ಲಿ ಉಂಡೆಗಳಾಗಿದ್ದರೆ ಸ್ಟೀಲ್ ಪ್ಲೇಟ್ ಬಳಸಿ ಸ್ವಚ್ಛಗೊಳಿಸಬಹುದು. ಅಕ್ಕಿಯನ್ನು ಒಡೆದ ನಂತರ ಎಲ್ಲಾ ಹುಳಗಳು ಅಕ್ಕಿಯಿಂದ ಹೊರಬರುತ್ತವೆ ಮತ್ತು ಅಕ್ಕಿ ಶುದ್ಧವಾಗುತ್ತದೆ.ಅಕ್ಕಿ ಹುಳುಗಳನ್ನು ಹೇಗೆ ತೆಗೆದುಹಾಕುವುದುಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿದಾಗ ಒಂದು ರೀತಿಯ ಕೀಟಗಳಾಗುತ್ತವೆ. ಹಾಗೆ ಆಗದಂತೆ ತಡೆಯಲು ಅಕ್ಕಿ ಡಬ್ಬಿಯಲ್ಲಿ ಪಲಾವ್ ಎಲೆಗಳನ್ನು ಹಾಕಿಡಿ. ಅಥವಾ ಲವಂಗವನ್ನು ಕೂಡ ಹಾಕಿಡಬಹುದು.
ಇದಲ್ಲದೆ ಬೆಂಕಿಕಡ್ಡಿ ಮೇಲೆ ಕಾಗದವನ್ನು ಸುತ್ತಿ ಅದನ್ನು ಅಕ್ಕಿಯಲ್ಲಿ ಹಾಕಿಟ್ಟರೆ ಹುಳಗಳಾಗುವುದಿಲ್ಲ. ಇದನ್ನೆಲ್ಲ ಹಾಕಿಡುವ ಮೊದಲೇ ಹುಳಗಳಾಗಿಬಿಟ್ಟಿದ್ದರೆ ಅದನ್ನು ಬಿಸಿಲಿನಲ್ಲಿ ಹರವಿಡಿ. ಹೀಗೆ ಮಾಡುವುದರಿಂದ ಹುಳಗಳು ಹೊರಟು ಹೋಗುತ್ತವೆ. ಅಕ್ಕಿಯನ್ನು ಪಾರದರ್ಶಕ ಪಾತ್ರೆಯಲ್ಲಿ ತೊಳೆಯಿರಿ. ಅಕ್ಕಿಯನ್ನು ತೊಳೆಯಲು ಯಾವಾಗಲೂ ಪಾರದರ್ಶಕ ಪಾತ್ರೆಗಳನ್ನು ಬಳಸಿದ್ರೆ ಹುಳಗಳು, ಕೀಟಗಳನ್ನು ಗುರುತಿಸಿ ಸ್ವಚ್ಛ ಮಾಡಬಹುದು. ಅಕ್ಕಿಯನ್ನು ಸ್ವಚ್ಛಗೊಳಿಸಲು ವಿಶೇಷ ಪಾತ್ರೆಗಳೂ ಮಾರುಕಟ್ಟೆಗೆ ಬಂದಿವೆ. ಅಕ್ಕಿ ತೊಳೆಯುವಾಗ ಬಿಸಿ ನೀರನ್ನು ಬಳಸಿ. ಈ ರೀತಿ ಮಾಡುವುದರಿಂದ ಅಕ್ಕಿಯಲ್ಲಿ ಆಕಸ್ಮಿಕವಾಗಿ ಉಳಿದಿರುವ ಹುಳಗಳು ಸಾಯುತ್ತವೆ ಮತ್ತು ಅಕ್ಕಿ ಚೆನ್ನಾಗಿ ಶುಚಿಯಾಗುತ್ತದೆ.