alex Certify ವಿಪರೀತ ಬಿಸಿಲು ಸೆಖೆಯಿಂದಾಗಿ ಯುವಜನತೆಯಲ್ಲಿ ಹೆಚ್ಚುತ್ತಿದೆ ಕಿಡ್ನಿ ಕಲ್ಲಿನ ಸಮಸ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಪರೀತ ಬಿಸಿಲು ಸೆಖೆಯಿಂದಾಗಿ ಯುವಜನತೆಯಲ್ಲಿ ಹೆಚ್ಚುತ್ತಿದೆ ಕಿಡ್ನಿ ಕಲ್ಲಿನ ಸಮಸ್ಯೆ….!

ದೆಹಲಿಯಲ್ಲಿ ವಿಪರೀತ ಬಿಸಿಲು ಮತ್ತು ಸೆಖೆಯ ಹೊಡೆತಕ್ಕೆ ಜನರು ಕಂಗಾಲಾಗಿದ್ದಾರೆ. ಇದರ ಪರಿಣಾಮ ಯುವಕರ ಆರೋಗ್ಯದ ಮೇಲಾಗುತ್ತಿದೆ. ಸಿಕ್ಕಾಪಟ್ಟೆ ಬಿಸಿಲು ಮತ್ತು ಶಾಖದ ಹೊಡೆತದಿಂದಾಗಿ ನಗರದಲ್ಲಿ 20-40 ವರ್ಷ ವಯಸ್ಸಿನವರಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಕಳೆದ ಒಂದು ತಿಂಗಳಲ್ಲಿ ಯುವಜನರಲ್ಲಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ 30-40 ಪ್ರತಿಶತದಷ್ಟು ಹೆಚ್ಚಾಗಿದೆ.

ಇದಕ್ಕೆ ಕಾರಣ ಶಾಖ ಮತ್ತು ಅದರಿಂದ ಉಂಟಾಗುವ ನಿರ್ಜಲೀಕರಣ.  ಯುವಜನತೆ ಹೆಚ್ಚು ಸಮಯ ಕಾಲೇಜು ಮತ್ತು ಕಚೇರಿ ಕೆಲಸದಲ್ಲಿರುತ್ತಾರೆ. ಇದರಿಂದಾಗಿ ಅತಿಯಾದ ಬೆವರುವಿಕೆಯಿಂದ ದೇಹದಲ್ಲಿ ಡಿಹೈಡ್ರೇಶನ್‌ ಉಂಟಾಗುತ್ತಿದೆ. ಡಿಹೈಡ್ರೇಶನ್‌ ಮತ್ತು ಮೂತ್ರಪಿಂಡದ ಕಲ್ಲುಗಳ ನಡುವೆ ಸಂಬಂಧವಿದೆ. ಇದನ್ನು ಕೂಡ ಜನಸಾಮಾನ್ಯರು ತಿಳಿದುಕೊಂಡಿರಬೇಕು.

ಕಿಡ್ನಿ ಕಲ್ಲುಗಳು ಡಿಹೈಡ್ರೇಶನ್‌ನ ಸಾಮಾನ್ಯ ಅಡ್ಡ ಪರಿಣಾಮಗಳಲ್ಲೊಂದು. ದೇಹದಲ್ಲಿ ನೀರಿನ ಕೊರತೆಯಿದ್ದರೆ, ಮೂತ್ರವರ್ಧಕದ ಕೊರತೆ ಉಂಟಾಗುತ್ತದೆ. ಈ ಕಾರಣದಿಂದಾಗಿ  ಖನಿಜಗಳು ಒಟ್ಟಿಗೆ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಪರಿಣಾಮ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುತ್ತವೆ.

ಈ ಸಮಸ್ಯೆ ಬರದಂತೆ ನೋಡಿಕೊಳ್ಳಲು ಕಿಡ್ನಿಗಳ  ಆರೋಗ್ಯದ ಬಗ್ಗೆ ಗಮನಕೊಡಬೇಕು. ದೇಹದಲ್ಲಿ ನೀರಿನ ಕೊರತೆ ಉಂಟಾಗಿರುವ ಕೆಲವು ಲಕ್ಷಣಗಳನ್ನು ಗುರುತಿಸಬೇಕು. ಕಡಿಮೆ ಮೂತ್ರ ವಿಸರ್ಜನೆಯಾಗುವುದು, ಏದುಸಿರು ಬರುವುದು, ಸುಸ್ತು, ದೌರ್ಬಲ್ಯ, ಹೃದಯ ಬಡಿತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಕಾಲಿನಲ್ಲಿ ಊತ ಇವೆಲ್ಲ ಕಿಡ್ನಿಯಲ್ಲಿ ಕಲ್ಲು ಬೆಳೆದಿದೆ ಎಂಬುದರ ಲಕ್ಷಣಗಳು.

ಕೆಲವೊಮ್ಮೆ ಸೊಂಟದ ಹಿಂಭಾಗ ಅಥವಾ ದಿಯಲ್ಲಿ ನಿರಂತರ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರದಲ್ಲಿ ರಕ್ತ ಬರಬಹುದು. ಜ್ವರ ಮತ್ತು ಶೀತ, ವಾಂತಿ, ಮೂತ್ರದಿಂದ ಬಲವಾದ ವಾಸನೆ, ನೊರೆ ಮೂತ್ರ, ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ ಇವೆಲ್ಲವೂ ಉಂಟಾಗುತ್ತವೆ. ಇವು ಕೂಡ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದರಿಂದ ಉಂಟಾಗುತ್ತವೆ.

ಡಿಹೈಡ್ರೇಶನ್‌ನಿಂದ ಉಂಟಾಗುವ ಮೂತ್ರಪಿಂಡದ ಸಮಸ್ಯೆಗಳನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸುವುದು. ಋತುಮಾನದ ತರಕಾರಿಗಳು ಮತ್ತು ಹಣ್ಣುಗಳನ್ನು ಸಹ ತಿನ್ನಬೇಕು. ಹೀಗೆ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...