alex Certify ಸಾಮಾನ್ಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಗೂ ಮೊದಲೇ ತಾಯಿಯಾಗಿದ್ದಳು ಈ ದೇಶದ ಪ್ರಧಾನಿ; ಇಂಟ್ರೆಸ್ಟಿಂಗ್‌ ಆಗಿದೆ ಇವರ ಪ್ರೇಮಕಥೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾನ್ಯ ವ್ಯಕ್ತಿಯನ್ನು ಪ್ರೀತಿಸಿ ಮದುವೆಗೂ ಮೊದಲೇ ತಾಯಿಯಾಗಿದ್ದಳು ಈ ದೇಶದ ಪ್ರಧಾನಿ; ಇಂಟ್ರೆಸ್ಟಿಂಗ್‌ ಆಗಿದೆ ಇವರ ಪ್ರೇಮಕಥೆ…!

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಇಷ್ಟು ಕಡಿಮೆ ವಯಸ್ಸಿನಲ್ಲೇ ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಚರ್ಚೆಯಲ್ಲೂ ಇದ್ದಾರೆ. ಈಕೆ ಇಟಲಿಯ ಮೊದಲ ಮಹಿಳಾ ಪ್ರಧಾನಿ. ಮೆಲೋನಿ ಅವರ ನಿಜಜೀವನದ ಘಟನೆಗಳು ಕೂಡ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್‌ ಆಗಿವೆ. ಅದರಲ್ಲೂ ಮೆಲೋನಿ ಅವರ ಪ್ರೇಮಕಥೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ.

ಟಿವಿ ಸ್ಟುಡಿಯೋದಲ್ಲಿ ಪ್ರೇಮಾಂಕುರ

ಜಾರ್ಜಿಯಾ ಮೆಲೋನಿ, ಇಟಲಿಯ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ ಅವರನ್ನು ಪ್ರೀತಿಸುತ್ತಿದ್ದರು. 22ನೇ ವಯಸ್ಸಿನಲ್ಲಿಯೇ ಆಂಡ್ರಿಯಾ ಟಿವಿಯಲ್ಲಿ ಕೆಲಸ ಮಾಡುತ್ತಿದ್ದರು. ಮೆಲೋನಿ ಇಟಲಿಯ ಪ್ರಧಾನಿ ಹುದ್ದೆಗೇರಿದ ಮೇಲೆ ಗಿಯಾಂಬ್ರುನೋ ಉದ್ಯೋಗವನ್ನು ತ್ಯಜಿಸಿದರು. ನಂತರ ಸುದ್ದಿ ನಿರೂಪಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು.

ಇವರಿಬ್ಬರ ನಡುವಿನ ಲವ್ ಸ್ಟೋರಿ ಶುರುವಾಗಿದ್ದು ಟಿವಿ ಸ್ಟುಡಿಯೋದಲ್ಲಿ. ಮೆಲೋನಿ ಕೂಡ ಪ್ರಧಾನಿಯಾಗುವ ಮೊದಲು ಪತ್ರಕರ್ತರಾಗಿದ್ದರು. ಒಂದೇ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಸಂಸದೀಯ ಚುನಾವಣೆಗಳಲ್ಲಿ ಜಯಗಳಿಸಿ 2022 ರಲ್ಲಿ ಮೆಲೋನಿ ಪ್ರಧಾನಿ ಹುದ್ದೆಗೇರಿದರು. ಬಳಿಕ ರೋಮ್‌ನಲ್ಲಿ ಸೆಟಲ್‌ ಆದ ಗಿಯಾಂಬ್ರುನೋ, ಅಶ್ಲೀಲ ಕಾಮೆಂಟ್‌ ಹಗರಣದಲ್ಲಿ ಸಿಲುಕಿಕೊಂಡು ಕೆಲಸದಿಂದ ಅಮಾನತಾಗಿದ್ದರು.

ಇಬ್ಬರೂ ಮೊದಲ ಬಾರಿಗೆ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಅವರ ನಡುವೆ ರಾಜಕೀಯ ಸಿದ್ಧಾಂತದ ಬಗ್ಗೆ ಭಿನ್ನಾಭಿಪ್ರಾಯವಿತ್ತು, ಆದರೆ ಇಬ್ಬರೂ ಒಬ್ಬರನ್ನೊಬ್ಬರು ಗೌರವಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದರು. ಇಬ್ಬರೂ ಲಿವ್‌ ಇನ್‌ನಲ್ಲಿದ್ದರು. 2016 ರಲ್ಲಿ ಮೆಲೋನಿ ಹೆಣ್ಣುಮಗುವಿಗೆ ತಾಯಿಯಾದರು.

ಇಟಲಿ ಪ್ರಧಾನಿ ಮೆಲೋನಿ ಮದುವೆಯಾಗದೇ ತಾಯಿಯಾಗಿದ್ದರು. 2023 ರಲ್ಲಿ ಮೆಲೋನಿ ಹಾಗೂ ಆಂಡ್ರಿಯಾ ಗಿಯಾಂಬ್ರುನೊ ಸಂಬಂಧ ಮುರಿದುಬಿದ್ದಿದೆ. ಟಿವಿ ಕಾರ್ಯಕ್ರಮವೊಂದರಲ್ಲಿ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಅನುಚಿತವಾದ ಕಾಮೆಂಟ್‌ ಮಾಡಿದ ಆರೋಪ ಆಂಡ್ರಿಯಾ ಮೇಲಿತ್ತು. ವರ್ಷದ ಹಿಂದೆಯೇ ಮೆಲೋನಿ ಹಾಗೂ ಆಂಡ್ರಿಯಾ ಬ್ರೇಕಪ್‌ ಮಾಡಿಕೊಂಡಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...