ಯುಗಾದಿ ಹಬ್ಬದ ಮಾರನೇ ದಿನ ಆಚರಿಸುವ ಹೊಸತೊಡಕು ಹಬ್ಬದ ಹಾಗೂ ರಂಜಾನ್ ಹಬ್ಬದ ಹಿನ್ನೆಲೆ ಮಟನ್ ಬೆಲೆ ಗಗನಕ್ಕೇರಿದೆ.
ಹೊಸತೊಡಕು ಹಾಗೂ ರಂಜಾನ್ ಹಬ್ಬದ ಹಿನ್ನೆಲೆ ಮಟನ್ ಗೆ ಭಾರಿ ಬೇಡಿಕೆ ಬಂದಿದ್ದು, ಆದ್ದರಿಂದ ಮಟನ್ ಬೆಲೆ ಹೆಚ್ಚಳವಾಗಿದೆ. ಒಂದು ಕೆಜಿಗೆ 800 ರಿಂದ 900 ರೂಗೆ ಮಾರಾಟವಾಗುತ್ತಿದೆ.
ಮಟನ್ ಅಲ್ಲದೇ ಚಿಕನ್ ಬೆಲೆ ಕೂಡ ಹೆಚ್ಚಳವಾಗಿದೆ. ನಾಟಿ ಕೋಳಿ ಕೆಜಿಗೆ 400 ರೂಪಾಯಿ, ಫಾರಮ್ ಕೋಳಿಗೆ 160 ರೂಪಾಯಿ , ಬಾಯ್ಲರ್ ಕೋಳಿಗೆ 200 ರೂಪಾಯಿ, ವಿತ್ ಸ್ಕಿನ್ ಚಿಕನ್ ಗೆ 280 ಆಗಿದೆ. ಬೆಂಗಳೂರಿನಲ್ಲಿ 300 ರೂ ಇದ್ದ ಹಂದಿ ಮಾಂಸದ ಬೆಲೆ 600ರ ಗಡಿ ತಲುಪಿದೆ.
ಮಾಂಸದ ಬೆಲೆ ಎಷ್ಟೇ ಇರಲಿ…ಅದೆಷ್ಟೇ ರೇಟ್ ಆಗಲಿ…ಹಬ್ಬದೂಟಕ್ಕಂತೂ ನಮಗೆ ಮಾಂಸ ಬೇಕು ಎನ್ನುತ್ತಾರೆ ಗ್ರಾಹಕರು..ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಮಾಂಸದ ಅಂಗಡಿಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದೆ.