ನವದೆಹಲಿ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಮತ್ತೆ ಇಳಿಕೆಯಾಗಿದೆ. ಗುರುವಾರ ಡಬ್ಲ್ಯೂಟಿಐ ಕಚ್ಚಾತೈಲ ದರ ಶೇಕಡ 0.41 ರಷ್ಟು ಇಳಿಕೆ ಕಂಡಿದ್ದು, ಬ್ಯಾರೆಲ್ ಗೆ 80.57 ಡಾಲರ್ ಆಗಿದೆ.
ಬ್ರೆಂಟ್ ಕಚ್ಚಾ ತೈಲದ ದರ ಶೇಕಡ 0.38 ರಷ್ಟು ಕುಸಿತ ಕಂಡಿದ್ದು, ಬ್ಯಾರೆಲ್ ಗೆ 84.93 ಡಾಲರ್ ಆಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಮತ್ತೆ ಇಳಿಕೆಯಾಗಿರುವುದು ತೈಲ ಆಮದು ಅವಲಂಬಿಸಿರುವ ಭಾರತದಂತಹ ದೇಶಗಳಿಗೆ ದೊಡ್ಡ ವರದಾನವಾಗಿದೆ. ಇದೇ ಟ್ರೆಂಡ್ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ದೇಶಿಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆಯಾಗುವ ಸಾಧ್ಯತೆ ಇದೆ.