ಬಳ್ಳಾರಿ : ಸಂಡೂರಿನಲ್ಲಿ ಹಣದ ಬಲ ಕೆಲಸ ಮಾಡಿದೆ, ಸೋಲಿನ ಹೊಣೆ ನಾನೇ ಹೊರುವೆ ಎಂದು ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಹೇಳಿದ್ದಾರೆ.
ಸಂಡೂರಿನಲ್ಲಿ ಕಾಂಗ್ರೆಸ್ ನಾಯಕರು ಮತದಾರರಿಗೆ ಹಣ ಹಂಚಿದ್ದಾರೆ. ಹಣದ ಬಲದಿಂದ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯಲ್ಲಿ ದುಡಿದ ಕಾರ್ಯಕರ್ತರಿಗೆ ಬಂಗಾರು ಹನುಮಂತು ಧನ್ಯವಾದ ಅರ್ಪಿಸಿದರು.