alex Certify ಇಷ್ಟು ಚಿಕ್ಕ ವಯಸ್ಸಿನಲ್ಲೇ ಒಲಿದು ಬಂದಿದೆ ಥೈಲ್ಯಾಂಡ್‌ ಪ್ರಧಾನಿ ಹುದ್ದೆ; ಜಗತ್ತಿನ ಅತಿ ಕಿರಿಯ ಪಿಎಂಗಳು ಯಾರ್ಯಾರು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಷ್ಟು ಚಿಕ್ಕ ವಯಸ್ಸಿನಲ್ಲೇ ಒಲಿದು ಬಂದಿದೆ ಥೈಲ್ಯಾಂಡ್‌ ಪ್ರಧಾನಿ ಹುದ್ದೆ; ಜಗತ್ತಿನ ಅತಿ ಕಿರಿಯ ಪಿಎಂಗಳು ಯಾರ್ಯಾರು ಗೊತ್ತಾ….?

 

ಚಿಕ್ಕ ವಯಸ್ಸಿನಲ್ಲೇ ದೇಶದ ಉನ್ನತ ಹುದ್ದೆ ಅಲಂಕರಿಸುವುದು ಹೆಮ್ಮೆಯ ಸಂಗತಿ. ಜಗತ್ತಿನಲ್ಲಿ ಇಂತಹ ಅನೇಕ ಸಾಧಕರಿದ್ದಾರೆ. ಕಿರಿಯ ವಯಸ್ಸಿನಲ್ಲೇ ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಪ್ರಧಾನಿಗಳು, ರಾಷ್ಟ್ರಪತಿಗಳು ಮತ್ತು ಕುಲಪತಿಗಳ ಸಂಖ್ಯೆ ಸಾಕಷ್ಟಿದೆ. ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರದ ಮುಖ್ಯಸ್ಥರಾಗುವುದು ದೊಡ್ಡ ವಿಷಯ. ಇತಿಹಾಸವನ್ನು ಅವಲೋಕಿಸಿದರೆ 40 ವರ್ಷದೊಳಗೆ ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದವರ ಪಟ್ಟಿ ದೊಡ್ಡದಾಗಿದೆ.

ಪೈಟೊಂಗ್ಟಾರ್ನ್ ಶಿನವತ್ರಾ

ಪಾಟೊಂಗ್ಟಾರ್ನ್ ಶಿನಾವತ್ರಾ ಅವರು ಥೈಲ್ಯಾಂಡ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಥೈಲ್ಯಾಂಡ್‌ನ ಮಾಜಿ ಪ್ರಧಾನಿ ತಕ್ಸಿನ್ ಶಿನವತ್ರಾ ಅವರ ಪುತ್ರಿ. 37ನೇ ವಯಸ್ಸಿನಲ್ಲಿ ಅವರು ಪ್ರಧಾನಿ ಗದ್ದುಗೆ ಏರಿದ್ದು, ದೇಶದ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಆಗಸ್ಟ್ 21 ರಂದು ಶಿನವತ್ರಾಗೆ 38 ವರ್ಷ ತುಂಬಲಿದೆ.

ವಿಲಿಯಂ ಪಿಟ್‌ ದ ಯಂಗರ್‌

1759ರ ಮೇ 28 ರಂದು ಜನಿಸಿದ ವಿಲಿಯಂ ಪಿಟ್ ದಿ ಯಂಗರ್, 1783 ರಿಂದ 1801 ರವರೆಗೆ ಬ್ರಿಟನ್‌ನ ಪ್ರಧಾನ ಮಂತ್ರಿಯಾಗಿದ್ದರು. ಅವರು 1804 ರಲ್ಲಿ ಮತ್ತೊಮ್ಮೆ ಪ್ರಧಾನಿಯಾದರು. ಆದರೆ 1806ರಲ್ಲಿ ನಿಧನರಾದ ಕಾರಣ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು ವಿಶ್ವದ ಅತ್ಯಂತ ಕಿರಿಯ ಪ್ರಧಾನಿ. ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಾಗ ವಿಲಿಯಂ ಪಿಟ್‌ಗೆ ಕೇವಲ 24 ವರ್ಷ ಮತ್ತು 205 ದಿನಗಳು.

ಸೆಬಾಸ್ಟಿಯನ್ ಕುರ್ಜ್

ಸೆಬಾಸ್ಟಿಯನ್ ಕುರ್ಜ್ 27 ಆಗಸ್ಟ್ 1986 ರಂದು ಜನಿಸಿದರು. ಅವರು ಎರಡು ಬಾರಿ ಆಸ್ಟ್ರಿಯಾದ ಚಾನ್ಸೆಲರ್ ಆಗಿದ್ದರು. ಮೊದಲ ಅವಧಿ 2017 ರಿಂದ 2019 ರವರೆಗೆ ಮತ್ತು ಎರಡನೇ ಅವಧಿ 2020 ರಿಂದ 2021 ರವರೆಗೆ. 31 ವರ್ಷಕ್ಕೇ ಅಧಿಕಾರಕ್ಕೇರಿದ ಅವರು ವಿಶ್ವದ ಅತ್ಯಂತ ಕಿರಿಯ ಕುಲಪತಿ ಎನಿಸಿಕೊಂಡರು.

ವಾಲ್ಡೆಮಾರ್ ಪಾವ್ಲಾಕ್

ವಾಲ್ಡೆಮರ್ ಪಾವ್ಲಾಕ್ ಜನಿಸಿದ್ದು 5 ಸೆಪ್ಟೆಂಬರ್ 1959ರಲ್ಲಿ. ಕೇವಲ 32 ವರ್ಷ ಮತ್ತು 8 ತಿಂಗಳ ವಯಸ್ಸಿನವರಾಗಿದ್ದಾಗ 1992 ರಲ್ಲಿ ಅಲ್ಪಾವಧಿಗೆ ಪೋಲೆಂಡ್‌ನ ಪ್ರಧಾನ ಮಂತ್ರಿಯಾದರು. 1993 ರಲ್ಲಿ ಅವರು ಎರಡು ಬಾರಿ ದೇಶದ ಪ್ರಧಾನಿಯಾದರು ಮತ್ತು ನಂತರ 1995 ರವರೆಗೆ ಅಧಿಕಾರದಲ್ಲಿದ್ದರು. ನವೆಂಬರ್ 2007 ರಿಂದ ನವೆಂಬರ್ 2012 ರವರೆಗೆ ಅವರು ಪೋಲೆಂಡ್‌ನ ಉಪ ಪ್ರಧಾನ ಮಂತ್ರಿಯಾಗಿದ್ದರು.

ಸನಾ ಮರಿನ್

ಸನಾ ಮರಿನ್ 16 ನವೆಂಬರ್ 1985 ರಂದು ಜನಿಸಿದರು. ಅವರು 2019 ರಿಂದ 2023 ರವರೆಗೆ ಫಿನ್‌ಲ್ಯಾಂಡ್‌ನ ಪ್ರಧಾನ ಮಂತ್ರಿಯಾಗಿದ್ದರು. ಆಕೆ ಪ್ರಧಾನಿ ಹುದ್ದೆಗೇರಿದಾಗ ಕೇವಲ 34 ವರ್ಷ. ವಿಶ್ವದ ಅತ್ಯಂತ ಕಿರಿಯ ಮಹಿಳಾ ಪ್ರಧಾನಿ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಒಲೆಕ್ಸಿ ಹೊಂಚರುಕ್

ಒಲೆಕ್ಸಿ ಹೊಂಚರುಕ್ ಜನಿಸಿದ್ದು 7 ಜುಲೈ 1984ರಲ್ಲಿ. 2019ರಲ್ಲಿ ಅವರು ಉಕ್ರೇನ್‌ನ ಅತ್ಯಂತ ಕಿರಿಯ ಪ್ರಧಾನಿಯಾದರು. 35 ವರ್ಷಕ್ಕೇ ಅಧಿಕಾರಕ್ಕೇರಿದರು. ಆದರೆ ಅಧಿಕಾರಾವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...