alex Certify ʼಜ್ಞಾನವಾಪಿʼ ವಿವಾದದಲ್ಲಿ ಚರ್ಚೆಗೆ ಬಂದಿದೆ ಪೂಜಾ ಸ್ಥಳಗಳ ಕಾಯಿದೆ 1991; ಇಲ್ಲಿದೆ ಈ ನಿಯಮದ ಕುರಿತ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜ್ಞಾನವಾಪಿʼ ವಿವಾದದಲ್ಲಿ ಚರ್ಚೆಗೆ ಬಂದಿದೆ ಪೂಜಾ ಸ್ಥಳಗಳ ಕಾಯಿದೆ 1991; ಇಲ್ಲಿದೆ ಈ ನಿಯಮದ ಕುರಿತ ಸಂಪೂರ್ಣ ವಿವರ

ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ವಿಚಾರ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ವಾರಣಾಸಿ ಜಿಲ್ಲಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿಯ ನಿರ್ವಹಣಾ ಸಮಿತಿ ಅಲಹಾಬಾದ್ ಹೈಕೋರ್ಟ್‌ ಮೆಟ್ಟಿಲೇರಿದೆ. ಪೂಜಾ ಸ್ಥಳಗಳ ಕಾಯ್ದೆ 1991ನ್ನು ಉಲ್ಲೇಖಿಸಿ ಜಿಲ್ಲಾ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿದೆ.

ಪೂಜಾ ಸ್ಥಳಗಳ ಕಾಯ್ದೆ 1991ರ ಕುರಿತಂತೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಬಿಜೆಪಿ ಸಂಸದ ಹರನಾಥ್ ಸಿಂಗ್ ಈ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. ಅಷ್ಟಕ್ಕೂ ಈ ಕಾಯಿದೆಯಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳೋಣ.

ಪೂಜಾ ಸ್ಥಳಗಳ ಕಾಯಿದೆ ಎಂದರೇನು ?

ಪಿ.ವಿ.ನರಸಿಂಹರಾವ್ ಅವರ ಸರ್ಕಾರವು 1991 ರಲ್ಲಿ ಪೂಜಾ ಸ್ಥಳಗಳ ಕಾಯ್ದೆಯನ್ನು ಜಾರಿಗೆ ತಂದಿತು. ಇದನ್ನು ವಿಶೇಷ ನಿಬಂಧನೆಗಳ ಅಡಿಯಲ್ಲಿ ಮಾಡಲಾಯಿತು. ಈ ಕಾನೂನಿನ ಅಡಿಯಲ್ಲಿ ಆಗಸ್ಟ್ 15, 1947ರ ಮೊದಲು ನಿರ್ಮಿಸಲಾದ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡಲಾಗಿದೆ. ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಯಾವುದೇ ಧರ್ಮದ ಆರಾಧನಾ ಸ್ಥಳವನ್ನು ಬೇರೆ ಯಾವುದೇ ಧರ್ಮದ ಪೂಜಾ ಸ್ಥಳವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಈ ಕಾಯಿದೆಯ ಅಡಿಯಲ್ಲಿ ಯಾವುದೇ ಧಾರ್ಮಿಕ ಸ್ಥಳದ ಸ್ಥಿತಿಯನ್ನು ಬದಲಾಯಿಸುವುದು ಕಾನೂನುಬಾಹಿರವಾಗಿದೆ.

ಅಷ್ಟೇ ಅಲ್ಲ ಈ ಕಾನೂನಿನ ಪ್ರಕಾರ ಅನ್ಯ ಧರ್ಮದವರು ಒತ್ತುವರಿ ಮಾಡಿಕೊಂಡಿರುವ ಸಾಕ್ಷ್ಯದ ಮೇಲೂ ಕ್ರಮ ಕೈಗೊಳ್ಳುವಂತಿಲ್ಲ. ಕಾಯ್ದೆಯ ಪ್ರಕಾರ ಯಾರಾದರೂ ಈ ನಿಯಮಗಳನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ದಂಡವನ್ನೂ ಹಾಕಬಹುದು. ಪೂಜಾ ಸ್ಥಳಗಳ ಕಾಯಿದೆ 1991ನ್ನು ಅಯೋಧ್ಯೆಯಲ್ಲಿ ರಾಮಮಂದಿರ ಆಂದೋಲನವು ಉತ್ತುಂಗದಲ್ಲಿದ್ದಾಗ ಜಾರಿಗೆ ತರಲಾಯಿತು.

ಆಂದೋಲನದ ದೃಷ್ಟಿಯಿಂದ, ದೇಶದಲ್ಲಿ ಅನೇಕ ದೇವಾಲಯಗಳು ಮತ್ತು ಮಸೀದಿಗಳ ಬಗ್ಗೆ ವಿವಾದಗಳೆದ್ದವು. ಅದನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನನ್ನು ಮಾಡಲಾಯಿತು. ಆದರೆ ಕಾಯ್ದೆಯಿಂದ ರಾಮ ಮಂದಿರ ವಿವಾದವನ್ನು ದೂರ ಇಡಲಾಗಿತ್ತು. ಬ್ರಿಟಿಷರ ಕಾಲದಿಂದಲೂ ಅಯೋಧ್ಯೆ ಪ್ರಕರಣ ನ್ಯಾಯಾಲಯದಲ್ಲಿದ್ದಿದ್ದರಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಈ ಕಾನೂನು ಅಡ್ಡಿಯಾಗಲಿಲ್ಲ. ಇದರ ಅಡಿಯಲ್ಲಿ ASI ರಕ್ಷಿತ ಕಟ್ಟಡಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...