ಬ್ರಿಟನ್‌ನ ಎಡ್ ವೈಸ್ ಎಂಬ ವ್ಯಕ್ತಿಯೊಬ್ಬರು ರೈಲ್ವೇ ಇಲಾಖೆಯ ನಿಯಮಗಳನ್ನು ತಿರುಚಿ, ಒಂದು ವರ್ಷ ಪೂರ್ತಿ ಉಚಿತವಾಗಿ ರೈಲು ಪ್ರಯಾಣ ಮಾಡಿ, ಲಕ್ಷಾಂತರ ರೂಪಾಯಿ ಉಳಿಸಿದ್ದಾರೆ. ರೈಲುಗಳ ಸಮಯ ಮತ್ತು ವಿಳಂಬದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿದ ಎಡ್ ವೈಸ್, ರೈಲು ವಿಳಂಬವಾದಾಗ ಟಿಕೆಟ್ ಹಣವನ್ನು ಹಿಂದಿರುಗಿಸುವ ನಿಯಮವನ್ನು ಬಳಸಿಕೊಂಡು ಈ ‘ಜುಗಾಡ್’ ಮಾಡಿದ್ದಾರೆ.
ಬ್ರಿಟನ್‌ನಲ್ಲಿ ರೈಲುಗಳು 15 ನಿಮಿಷ ವಿಳಂಬವಾದರೆ 25%, 30 ನಿಮಿಷ ವಿಳಂಬವಾದರೆ 50% ಮತ್ತು ಒಂದು ಗಂಟೆಗಿಂತ ಹೆಚ್ಚು ವಿಳಂಬವಾದರೆ ಪೂರ್ತಿ ಹಣವನ್ನು ಹಿಂದಿರುಗಿಸುವ ನಿಯಮವಿದೆ. ಈ ನಿಯಮವನ್ನು ಬಳಸಿಕೊಂಡು, ಎಡ್ ವೈಸ್ 2023 ರಲ್ಲಿ ಒಂದು ವರ್ಷ ಪೂರ್ತಿ ಉಚಿತವಾಗಿ ರೈಲು ಪ್ರಯಾಣ ಮಾಡಿದ್ದಾರೆ.
ಮುಷ್ಕರಗಳು, ನಿರ್ವಹಣೆ ಕಾರ್ಯಗಳು ಮತ್ತು ಕೆಟ್ಟ ಹವಾಮಾನದಿಂದ ರೈಲುಗಳು ವಿಳಂಬವಾಗುವ ಸಾಧ್ಯತೆ ಹೆಚ್ಚಿರುವುದನ್ನು ಗಮನಿಸಿದ ಎಡ್ ವೈಸ್, ಆ ಸಮಯದಲ್ಲಿ ಟಿಕೆಟ್ ಬುಕ್ ಮಾಡಿ ಹಣವನ್ನು ಹಿಂದಿರುಗಿಸಿಕೊಂಡಿದ್ದಾರೆ. ಈ ಮೂಲಕ ಅವರು ಒಂದು ವರ್ಷದಲ್ಲಿ 1.06 ಲಕ್ಷ ರೂಪಾಯಿ ಉಳಿಸಿದ್ದಾರೆ.
ಈ ಸೂಪರ್ ‘ಜುಗಾಡ್’ ಬಗ್ಗೆ ತಿಳಿದ ರೈಲ್ವೇ ಇಲಾಖೆಯೂ ಏನೂ ಮಾಡಲು ಸಾಧ್ಯವಾಗಲಿಲ್ಲ. ಎಡ್ ವೈಸ್, ರೈಲ್ವೇ ಇಲಾಖೆಯ ನಿಯಮಗಳನ್ನು ಬಳಸಿಕೊಂಡು, ಕಾನೂನು ಉಲ್ಲಂಘಿಸದೆ ಈ ‘ಜುಗಾಡ್’ ಮಾಡಿದ್ದಾರೆ.