ಕಲಬುರಗಿ : ಕೆಲವೊಂದು ಘಟನೆಗಳು ನಂಬಲು ಅಸಾಧ್ಯ. ಇಲ್ಲಿ ನಡೆದಿರುವ ಘಟನೆ ಬಗ್ಗೆ ಕೇಳಿದ್ರೆ ಇಂತಹ ಪೋಷಕರು ಇರುತ್ತಾರಾ ಎಂಬ ಪ್ರಶ್ನೆ ಮೂಡುತ್ತದೆ.
ಹೌದು, ನಗರದಲ್ಲಿ ಮನಕಲುಕುವ ಘಟನೆಯೊಂದು ನಡೆದಿದ್ದು, ಮೃತಪಟ್ಟ 4 ವರ್ಷದ ಮಗನ ಅಂತ್ಯಕ್ರಿಯೆ ಮಾಡದೇ ಪೋಷಕರು ಶವವನ್ನು ಬಿಟ್ಟು ಹೋದ ಘಟನೆ ವರದಿಯಾಗಿದೆ.
ಕಲಬುರಗಿಯ ತಾರಪೈಲ್ ಬಡಾವಣೆ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತಪಟ್ಟ ಬಾಲಕನ ಶವವನ್ನು ಅಂತ್ಯಕ್ರಿಯೇ ಮಾಡದೇ ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟು ಹೋಗಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಈ ಬಗ್ಗೆ ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತ ಬಾಲಕನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.