ಮಾವಿನ ಕಾಯಿ, ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದನ್ನು ನೀವು ಕೇಳಿರ್ತೀರಾ. ಆದ್ರೆ ಮಾವಿನ ಎಲೆಗಳಲ್ಲೂ ಸಾಕಷ್ಟು ಔಷಧಿ ಗುಣಗಳಿವೆ. ಮಾವಿನ ಎಲೆ ಅನೇಕ ರೋಗಗಳಿಗೆ ರಾಮಬಾಣ.
ಮಧುಮೇಹಕ್ಕೆ ಮಾವಿನ ಎಲೆ ಒಳ್ಳೆಯದು. ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತ್ರ ಅದನ್ನು ಪುಡಿ ಮಾಡಿ. ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.
ರಕ್ತದೊತ್ತಡದ ಸಮಸ್ಯೆ ನಿಮಗಿದ್ದರೆ ಮಾವಿನ ಎಲೆ ಬಹಳ ಒಳ್ಳೆಯದು. ಎಲೆಗಳನ್ನು ಬಿಸಿ ನೀರಿನಲ್ಲಿ ಕುದಿಸಿ. ಆ ನೀರನ್ನು ಸ್ನಾನ ಮಾಡುವ ನೀರಿಗೆ ಬೆರೆಸಿ ಸ್ನಾನ ಮಾಡಿ.
ಅಸ್ತಮಾದಿಂದ ಬಳಲುತ್ತಿರುವವರಿಗೆ ಮಾವಿನ ಎಲೆಗಳು ನೆಮ್ಮದಿ ನೀಡಲಿವೆ. ಮಾವಿನ ಎಲೆಗಳನ್ನು ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಅಸ್ತಮಾ ಕಡಿಮೆಯಾಗುತ್ತದೆ.
ಕೆಲವರನ್ನು ಬಿಕ್ಕಳಿಕೆ ಕಾಡುತ್ತದೆ. ಏನೇ ಮಾಡಿದ್ರೂ ಬಿಕ್ಕಳಿಕೆ ಕಡಿಮೆಯಾಗುವುದಿಲ್ಲ. ಅಂತವರು ಮಾವಿನ ಎಲೆಗಳನ್ನು ಕುದಿಸಿ, ಆ ನೀರಿನಲ್ಲಿ ಬಾಯಿ ಮುಕ್ಕಳಿಸಿ.