ಬ್ರಿಟನ್‌ನ ಮರ್ಸಿಸೈಡ್ ಮೂಲದ ಜಾನ್ ಟಿನ್ನಿಸ್ವುಡ್ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ. ಸಧ್ಯ ಈತ ಸೌತ್‌ಪೋರ್ಟ್‌ನಲ್ಲಿರುವ ಕೇರ್ ಹೋಮ್‌ನಲ್ಲಿ ವಾಸಿಸುತ್ತಿದ್ದಾರೆ. ಇವರ ದೀರ್ಘಾಯುಷ್ಯದ ರಹಸ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ‘ಮೆದುಳಿನ ವ್ಯಾಯಾಮ’ ಮತ್ತು ‘ಶಾಂತವಾಗಿರುವ’ ಮೂಲಕವೇ ಶತಾಯುಷಿಯಾಗಿದ್ದಾರೆ ಜಾನ್.
ಟಿನ್ನಿಸ್‌ವುಡ್‌ಗಿಂತ ಮೊದಲು ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೊರಾ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. 114 ವರ್ಷ ವಯಸ್ಸಿನ ಜುವಾನ್ ವಿಸೆಂಟೆ ಮಂಗಳವಾರ ನಿಧನರಾದರು.
ಸಧ್ಯ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿರೋ ಜಾನ್ ತಮ್ಮ ದೀರ್ಘಾಯುಷ್ಯವು ಕೇವಲ ಅದೃಷ್ಟದ ಆಟ ಎನ್ನುತ್ತಾರೆ. ಅವರು ಯಾವುದೇ ವಿಶೇಷ ಆಹಾರಕ್ರಮವನ್ನು ಅನುಸರಿಸುವುದಿಲ್ಲವಂತೆ. ಆದರೆ ಪ್ರತಿ ಶುಕ್ರವಾರ ತಮ್ಮ ನೆಚ್ಚಿನ ಊಟ ಮೀನು ಮತ್ತು ಚಿಪ್ಸ್ ತಿನ್ನುತ್ತಾರೆ.
ಜಾನ್ ಜನಿಸಿದ್ದು ಆಗಸ್ಟ್ 26, 1912 ರಂದು. ಉತ್ತರ ಇಂಗ್ಲೆಂಡ್‌ನ ಮರ್ಸಿಸೈಡ್‌ನಲ್ಲಿ ಜನಿಸಿದ ಟಿನ್ನಿಸ್ವುಡ್, ನಿವೃತ್ತ ಅಕೌಂಟೆಂಟ್ ಮತ್ತು ಮಾಜಿ ಅಂಚೆ ಸೇವೆ ಉದ್ಯೋಗಿ. ಅವರ ವಯಸ್ಸು ಈಗ 111 ವರ್ಷ ಮತ್ತು 222 ದಿನಗಳು. ಅವರು ಕೆಲಸದಿಂದ ನಿವೃತ್ತರಾಗಿ 50 ವರ್ಷಗಳು ಕಳೆದಿವೆ.
ಇಷ್ಟು ವರ್ಷಗಳ ಕಾಲ ಬದುಕಿರುವುದಕ್ಕೆ ಕಾರಣ ಹುಡುಕುವುದು ಅಸಾಧ್ಯ ಎನ್ನುತ್ತಾರೆ ಜಾನ್. ಆಯಸ್ಸನ್ನು ಕಡಿಮೆ ಅಥವಾ ಹೆಚ್ಚು ಮಾಡಲು ಸಾಧ್ಯವಿಲ್ಲ. ಜಗತ್ತು ತನ್ನದೇ ಆದ ರೀತಿಯಲ್ಲಿ ಯಾವಾಗಲೂ ಬದಲಾಗುತ್ತಿರುತ್ತದೆ ಎಂದವರು ಹೇಳುತ್ತಾರೆ. ಜಾನ್ ಅವರ ಹೆಸರು ಸದ್ಯ ಗಿನ್ನೆಸ್ ದಾಖಲೆಗೂ ಸೇರ್ಪಡೆಯಾಗಿದೆ.
116 ವರ್ಷ ಮತ್ತು 54 ದಿನಗಳ ಕಾಲ ಬದುಕಿದ್ದ ಜಪಾನ್‌ನ ಜಿರೋಮನ್ ಕಿಮುರಾ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. 117 ವರ್ಷ ವಯಸ್ಸಿನ ಸ್ಪೇನ್‌ನ ಮರಿಯಾ ಬ್ರಾನ್ಯಾಸ್ ಮೊರೆರಾ, ವಿಶ್ವದಲ್ಲೇ ಅತಿ ಹೆಚ್ಚು ಕಾಲ ಬದುಕಿದ್ದ ಮಹಿಳೆ.