ಜೈಪುರದ ಒಬೆರಾಯ್ ರಾಜವಿಲಾಸ್ ವಿಶ್ವದ ಅತ್ಯುತ್ತಮ ಹೋಟೆಲ್ ಪ್ರಶಸ್ತಿಯನ್ನು ಗೆದ್ದಿದೆ. ಟ್ರಾವೆಲ್ + ಲೀಸರ್, ಯುಎಸ್ ಎ 2024 ರ ವಿಶ್ವದ ಅತ್ಯುತ್ತಮ ಪ್ರಶಸ್ತಿಗಳಲ್ಲಿ, ವಿಶ್ವದ ಅತ್ಯುತ್ತಮ ಹೋಟೆಲ್ ಎಂದು ಒಬೆರಾಯ್ ರಾಜವಿಲಾಸ್ ಅನ್ನು ಗೌರವಿಸಿದೆ. ಈ ಪ್ರಶಸ್ತಿಯು ಭಾರತದ ಆತಿಥ್ಯ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಒಬೆರಾಯ್ ರಾಜವಿಲಾಸ್ ಜೈಪುರ್ ಅತಿಥಿಗಳಿಗೆ ರಾಜಸ್ಥಾನದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ವಿಶಿಷ್ಟ ಮಿಶ್ರಣವನ್ನು ನೀಡುತ್ತದೆ. ಸಾಟಿಯಿಲ್ಲದ ಸೌಕರ್ಯ ಮತ್ತು ಐಷಾರಾಮಿ ಸೇವೆಯನ್ನು ಒದಗಿಸುತ್ತದೆ.
ಒಬೆರಾಯ್ ರಾಜವಿಲಾಸ್ ಅಲ್ಲದೆ ಈ ಪಟ್ಟಿಯಲ್ಲಿ ಇನ್ನೂ ಅನೇಕ ಭಾರತೀಯ ಹೊಟೇಲ್ ಗಳು ಸ್ಥಾನ ಪಡೆದಿವೆ. ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾ 15 ನೇ ಸ್ಥಾನದಲ್ಲಿದೆ. ತಾಜ್ ಎಕ್ಸೋಟಿಕಾ ರೆಸಾರ್ಟ್ ಮತ್ತು ಸ್ಪಾ, ಗೋವಾ 24 ನೇ ಸ್ಥಾನದಲ್ಲಿದೆ. ಒಬೆರಾಯ್ ಅಮರವಿಲಾಸ್, ಆಗ್ರಾ 27ನೇ ಸ್ಥಾನದಲ್ಲಿದೆ. ದಿ ಒಬೆರಾಯ್ ಉದಯವಿಲಾಸ್, ಉದಯಪುರ 30ನೇ ಸ್ಥಾನದಲ್ಲಿದೆ. ಲೀಲಾ ಪ್ಯಾಲೇಸ್ ಬೆಂಗಳೂರು 36 ನೇ ಸ್ಥಾನದಲ್ಲಿದೆ. ಒಬೆರಾಯ್ ವನ್ಯವಿಲಾಸ್ ವನ್ಯಜೀವಿ ರೆಸಾರ್ಟ್, ರಣಥಂಬೋರ್ 39 ನೇ ಸ್ಥಾನದಲ್ಲಿದೆ. ತಾಜ್ ಲ್ಯಾಂಡ್ಸ್ ಎಂಡ್, ಮುಂಬೈ: 53 ನೇ ಸ್ಥಾನದಲ್ಲಿದೆ. ಲೀಲಾ ಪ್ಯಾಲೇಸ್, ನವದೆಹಲಿ 62 ನೇ ಸ್ಥಾನದಲ್ಲಿದೆ. ಲೀಲಾ ಪ್ಯಾಲೇಸ್, ಉದಯಪುರ 65 ನೇ ಸ್ಥಾನದಲ್ಲಿದೆ. ತಾಜ್ ಲೇಕ್ ಪ್ಯಾಲೇಸ್, ಉದಯಪುರ ಹಾಗೂ ದಿ ಇಂಪೀರಿಯಲ್, ನವದೆಹಲಿ 92 ನೇ ಸ್ಥಾನವನ್ನು ಹಂಚಿಕೊಂಡಿವೆ.
ಇನ್ನು ವಿಶ್ವದ ಹೊಟೇಲ್ ಗಳನ್ನು ನೋಡೋದಾದ್ರೆ, ಒಬೆರಾಯ್ ರಾಜವಿಲಾಸ್ ಜೈಪುರ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಲಾ ಕಾಸಾ ಡೆ ಲಾ ಪ್ಲಾಯಾ, ಪ್ಲಾಯಾ ಡೆಲ್ ಕಾರ್ಮೆನ್, ಮೆಕ್ಸಿಕೋ ಇದೆ. ದಿ ರಿಟ್ಜ್-ಕಾರ್ಲ್ಟನ್, ದೋಹಾ ಕತಾರ್ ಮೂರನೇ ಸ್ಥಾನ ಪಡೆದಿದೆ.