ಬೆಂಗಳೂರು : ಸಿಎಂ ಕುರ್ಚಿ ಖಾಲಿ ಇಲ್ಲ ಅಂತ ಕುರ್ಚಿಗೆ ಟವೆಲ್ ಹಾಕುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳುತ್ತಲೆ, ಕುರ್ಚಿಗೆ ಟವೆಲ್ ಹಾಕುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಅಲ್ಲಿಗೆ ಭ್ರಷ್ಟ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಂತೂ ಖಚಿತ-ನಿಶ್ಚಿತ-ಖಂಡಿತ ಅನ್ನವುದು ಸಾಬೀತಾಗಿದೆ. ನಿಮ್ಮ ಸ್ವಾರ್ಥದ ಕುರ್ಚಿ ಕಚ್ಚಾಟದಲ್ಲಿ ಕನ್ನಡಿಗರಿಗೆ ಶಿಕ್ಷೆ ನೀಡಬೇಡಿ, ಅಧಿಕಾರ ನಡೆಸಲು ಯೋಗ್ಯತೆ ಇಲ್ಲವೆಂದ ಮೇಲೆ ಸರ್ಕಾರವನ್ನು ವಿಸರ್ಜಿಸಿ ಜನರ ಮುಂದೆ ಹೋಗುವುದು ಉತ್ತಮ ಎಂದು ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.