ಭಾರತದಲ್ಲಿ ಘೋಸ್ಟ್ ಶಾಪಿಂಗ್ ಸೆಂಟರ್‌ಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಭೂತ ಖರೀದಿ ಕೇಂದ್ರಗಳಿಂದ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಇತ್ತೀಚಿನ ವರದಿಯೊಂದರಲ್ಲಿ ಘೋಸ್ಟ್ ಮಾಲ್‌ಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ 8 ನಗರಗಳ ಹೆಸರುಗಳನ್ನೂ ಬಹಿರಂಗಪಡಿಸಲಾಗಿದೆ.
ಟೆನ್ಷನ್ ಹೆಚ್ಚಿಸಿದೆ ಭೂತಗಳ ಮಾಲ್…!
2022ಕ್ಕೆ ಹೋಲಿಸಿದರೆ ಸದ್ಯ ಘೋಸ್ಟ್ ಶಾಪಿಂಗ್ ಕೇಂದ್ರಗಳ ಸಂಖ್ಯೆ 2023ರಲ್ಲಿ 57 ರಿಂದ 64ಕ್ಕೆ ಏರಿದೆ. ಇದರೊಂದಿಗೆ ನಷ್ಟದ ಅಂಕಿ ಅಂಶವೂ ಹೆಚ್ಚಾಗಿದೆ. ಘೋಸ್ಟ್ ಮಾಲ್‌ಗಳಿಂದಾಗಿ 6700 ಕೋಟಿ ರೂಪಾಯಿ ನಷ್ಟವಾಗಿದೆ.
ಘೋಸ್ಟ್ ಮಾಲ್ ಎಂದರೇನು?
ಘೋಸ್ಟ್ ಮಾಲ್ ಎಂದರೆ ಅಲ್ಲಿ ಭೂತಗಳಿವೆ ಎಂದರ್ಥವಲ್ಲ. ಯಾವುದೇ ಮಾಲ್‌ಗಳಲ್ಲಿ ಅಥವಾ ಶಾಪಿಂಗ್ ಸೆಂಟರ್‌ನಲ್ಲಿ ಶೇ.40 ಕ್ಕಿಂತ ಹೆಚ್ಚು ಮಳಿಗೆಗಳು ಅಥವಾ ಜಾಗ ಖಾಲಿಯಾಗಿದ್ದರೆ ಅವುಗಳನ್ನು ಘೋಸ್ಟ್ ಮಾಲ್ ಎಂದು ಕರೆಯಲಾಗುತ್ತದೆ. ಅಲ್ಲಿಗೆ ಶಾಪಿಂಗ್ ಮಾಡಲು ಯಾರೂ ಬರುವುದಿಲ್ಲ ಅಥವಾ ಅವು ಮುಚ್ಚಿರುತ್ತವೆ.
ಈ ವರದಿಯ ಪ್ರಕಾರ ಎಂಟು ನಗರಗಳಲ್ಲಿ ಒಂತಹ ಒಟ್ಟು 64 ಖಾಲಿ ಮಾಲ್‌ಗಳಿವೆ. ಇವುಗಳ ಪೈಕಿ 21 ಮಾಲ್‌ಗಳು ದೆಹಲಿ-ಎನ್‌ಸಿಆರ್‌ನಲ್ಲಿವೆ. ಬೆಂಗಳೂರಿನಲ್ಲಿ 12 ಮತ್ತು ಮುಂಬೈನಲ್ಲಿ 10 ಇವೆ. ಅದೇ ರೀತಿ ಕೋಲ್ಕತ್ತಾದಲ್ಲಿ 6, ಹೈದರಾಬಾದ್‌ನಲ್ಲಿ 5, ಅಹಮದಾಬಾದ್‌ನಲ್ಲಿ 4 ಮತ್ತು ಚೆನ್ನೈನಲ್ಲಿ ಮೂರು ಮತ್ತು ಪುಣೆಯಲ್ಲಿ ಮೂರು ಇವೆ. ಕಳೆದ ಒಂದು ವರ್ಷದಲ್ಲಿ ಮಹಾನಗರಗಳಲ್ಲಿ ಶಾಪಿಂಗ್ ಸೆಂಟರ್‌ಗಳ ಸಂಖ್ಯೆ ಕಡಿಮೆಯಾಗಿದೆ. 2023 ರಲ್ಲಿ ಒಟ್ಟು ಶಾಪಿಂಗ್ ಕೇಂದ್ರಗಳ ಸಂಖ್ಯೆ 263ಕ್ಕೆ ಇಳಿದಿತ್ತು. ಕಳೆದ ವರ್ಷ 16 ಶಾಪಿಂಗ್ ಮಾಲ್‌ಗಳನ್ನು ಮುಚ್ಚಲಾಗಿತ್ತು.