alex Certify ಸಂಗಾತಿ ಸ್ವಭಾವ ಹೇಳುತ್ತೆ ಅವರಿಷ್ಟದ ʼಬಣ್ಣʼ…….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿ ಸ್ವಭಾವ ಹೇಳುತ್ತೆ ಅವರಿಷ್ಟದ ʼಬಣ್ಣʼ…….!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಣ್ಣಗಳು ಹಾಗೂ ವ್ಯಕ್ತಿಯ ಸ್ವರೂಪದ ನಡುವೆ ಸಂಬಂಧವಿದೆ. ಬಣ್ಣಗಳು ಕ್ರೂರ ಗ್ರಹಗಳ ನಕ್ಷತ್ರ ಪುಂಜವನ್ನು ಸರಿಪಡಿಸುತ್ತದೆ. ವ್ಯಕ್ತಿ ಇಷ್ಟಪಡುವ ಬಣ್ಣದ ಮೂಲಕ ಆತನ ಸ್ವಭಾವವನ್ನು ತಿಳಿಯಬಹುದಾಗಿದೆ.

ನಿಮ್ಮ ಸಂಗಾತಿ ಸ್ವಭಾವ ತಿಳಿಯಲು ಇಚ್ಛಿಸಿದ್ದರೆ ಮೊದಲು ಅವರಿಗಿಷ್ಟವಾಗುವ ಬಣ್ಣವನ್ನು ತಿಳಿದುಕೊಳ್ಳಿ. ಬಣ್ಣಗಳು ಸಂಗಾತಿ ಎಷ್ಟು ರೋಮ್ಯಾಂಟಿಕ್ ಹಾಗೂ ಅವರ ನಡುವೆ ಸಂಬಂಧ ಹೇಗಿರಬಹುದು ಎಂಬುದನ್ನು ಹೇಳುತ್ತದೆ.

ಬಿಳಿ ಬಣ್ಣ : ಬಿಳಿ ಬಣ್ಣ ಇಷ್ಟಪಡುವವರು ಎಂದೂ ಯಾರಿಗೂ ತಮ್ಮ ಮನಸ್ಸಿನ ಭಾವನೆಯನ್ನು ಹೇಳುವುದಿಲ್ಲ. ಹಾಗಾಗಿ ಅವರ ಸಂಗಾತಿ ನಡುವಿನ ಸಂಬಂಧ ಕೂಡ ದುರ್ಬಲವಾಗಿರುತ್ತದೆ.

ನೀಲಿ ಬಣ್ಣ : ನೀಲಿ ಬಣ್ಣ ಇಷ್ಟಪಡುವವರು ಸದಾ ಖುಷಿಯಾಗಿರುತ್ತಾರೆ. ಅವರು ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ.

ಹಸಿರು ಬಣ್ಣ : ಹಸಿರು ಬಣ್ಣ ಇಷ್ಟಪಡುವವರು ತಮ್ಮ ಭಾವನೆಗಳನ್ನು ನೇರವಾಗಿ ಹೇಳುತ್ತಾರೆ. ಪ್ರೀತಿ ಹಾಗೂ ಸಂಬಂಧವನ್ನು ಬೇರೆ ಬೇರೆ ಸ್ಥಾನದಲ್ಲಿಟ್ಟು ಯೋಚಿಸುತ್ತಾರೆ.

ಕಿತ್ತಳೆ ಬಣ್ಣ : ಕಿತ್ತಳೆ ಬಣ್ಣ ಇಷ್ಟಪಡುವವರು ಸೃಜನಶೀಲರಾಗಿರುತ್ತಾರೆ. ಅವರು ತಮ್ಮ ಪಾಲುದಾರರನ್ನು ಪ್ರತಿ ಬಾರಿ ಹೊಸ ಹೊಸ ರೀತಿಯಲ್ಲಿ ಪ್ರೀತಿಸುತ್ತಾರೆ.

ಗುಲಾಬಿ ಬಣ್ಣ : ಈ ಬಣ್ಣ ಇಷ್ಟಪಡುವವರು ಬಹಳ ಆಸಕ್ತಿಯುತರಾಗಿರುತ್ತಾರೆ. ಪ್ರಣಯದ ಬಗ್ಗೆ ನಾಚಿಕೆ ಸ್ವಭಾವ ಹೊಂದಿರುತ್ತಾರೆ. ಎಲ್ಲರಿಗೂ ಹೊಂದಿಕೊಳ್ಳುವ ಇವರು ತಾವಿಷ್ಟಪಡುವವರನ್ನು ಸಂತೋಷವಾಗಿಟ್ಟುಕೊಳ್ಳಲು ಬಯಸ್ತಾರೆ.

ಕಪ್ಪು ಬಣ್ಣ : ಕಪ್ಪು ಬಣ್ಣ ಇಷ್ಟಪಡುವ ಮಂದಿ ಬಹಳ ನೀರಸ ಸ್ವಭಾವದವರಾಗಿರುತ್ತಾರೆ. ಪ್ರೀತಿ ವಿಚಾರದಲ್ಲಿ ಪ್ರತಿಯೊಂದು ವಿಷ್ಯವನ್ನೂ ಅವರಿಗೆ ಬಿಡಿಸಿ ಹೇಳಬೇಕಾಗುತ್ತದೆ. ಸಂಗಾತಿ ಕಪ್ಪು ಬಣ್ಣವನ್ನು ಇಷ್ಟಪಡುತ್ತಿದ್ದರೆ ಅವರಿಗೆ ಪ್ರೀತಿ ಮಾಡುವುದನ್ನು ನೀವೇ ಹೇಳಿಕೊಡಬೇಕಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...