ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಹುಮಹಡಿ ಕಟ್ಟಡಗಳು ಧರಾಶಾಹಿಯಾಗುತ್ತಿವೆ. ಅದರಲ್ಲೂ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಟ್ಟಡಗಳ ಕಳಪೆ ಕಾಮಗಾರಿ ಬಣ್ಣ ಬಯಲಾಗುತ್ತಿವೆ.
ಇದೀಗ ಬೆಂಗಳೂರಿನ ಬಿನ್ನಿ ಮಿಲ್ ಸರ್ಕಲ್ ಬಳಿಯ 7 ಅಂತಸ್ತಿನ ಕಟ್ಟಡ ಕುಸಿಯುವ ಹಂತ ತಲುಪಿದೆ. ಕೇವಲ ಮೂರು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದ್ದ ಪೊಲೀಸ್ ಕ್ವಾರ್ಟ್ರಸ್ ಇದಾಗಿದ್ದು, ಒಂದೂವರೆ ಅಡಿಯಷ್ಟು ಕಟ್ಟಡ ಸಂಪೂರ್ಣವಾಗಿ ವಾಲಿದೆ.
ಈ ಪೊಲೀಸ್ ವಸತಿ ಸಂಕಿರ್ಣದಲ್ಲಿ ಸುಮಾರು 32 ಕುಟುಂಬಗಳು ವಾಸವಾಗಿದ್ದವು. ಇದೀಗ ಇಡೀ ಕಟ್ಟಡವೇ ವಾಲಿದ್ದರಿಂದ ಕಟ್ಟಡ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ.