
ತನ್ನ ಟೀಸರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮಾಡಿಸಿದ್ದ ‘ರಂಗಸಮುದ್ರ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅಂದುಕೊಂಡಂತೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಗಿದೆ.
ರಾಜಕುಮಾರ್ ಅಸ್ಕಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು ಸೇರಿದಂತೆ ಸಂಪತ್ ರಾಜ್, ಕಾರ್ತಿಕ್, ಉಗ್ರಂ ಮಂಜು, ಗುರುರಾಜ್ ಹೊಸಕೋಟೆ, ದಿವ್ಯ ಗೌಡ, ಸ್ಕಂದ, ಮಹೇಂದ್ರ ಬಣ್ಣ ಹಚ್ಚಿದ್ದಾರೆ.
ಹೊಯ್ಸಳ ಕೊಣನೂರ್ ತಮ್ಮ ಹೊಯ್ಸಳ ಕ್ರಿಯೇಶನ್ಸ್ ಬ್ಯಾನರ್ ನ ನಿರ್ಮಾಣ ಮಾಡಿದ್ದಾರೆ. ದೇಸಿ ಮೋಹನ್ ಸಂಗೀತ ಸಂಯೋಜನೆ ನೀಡಿದ್ದು, ವಾಗೀಶ್ ಚನ್ನಗಿರಿ ಸಾಹಿತ್ಯ, ಆರ್ ಗಿರಿ ಸಂಕಲನ ಮತ್ತು ಶ್ರೀಕಾಂತ್ ಛಾಯಾಗ್ರಹಣವಿದೆ.
