![](https://kannadadunia.com/wp-content/uploads/2024/01/e31633e4-fcc0-41c1-b30e-bc36b40ead89-1024x785.jpg)
ಜನವರಿ 5ರಂದು ರಾಜ್ಯದ್ಯಂತ ತೆರೆಕಂಡಿದ್ದ ಯತೀಶ್ ಪನ್ನ ಸಮುದ್ರ ನಿರ್ದೇಶನದ ‘ಒಂಟಿ ಬಂಟಿ ಲವ್ ಸ್ಟೋರಿ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೊಸಬರ ಈ ಪ್ರಯತ್ನಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಕಾಮಿಡಿ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಶ್ವೇತಾ ಭಟ್, ವೈಭವ್ ವರ್ಧನ್, ಶೃತಿ ಚಂದ್ರಶೇಖರ್, ಯತೀಶ್ ಪನ್ನ ಸಮುದ್ರ, ರಾಜು ಶೃಂಗೇರಿ, ಪೂಜಾ ಲತಾ, ಮಂಜುನಾಥ್ ತೆರೆ ಹಂಚಿಕೊಂಡಿದ್ದಾರೆ.
ಶ್ರೀಹರಿ ಶ್ರೇಷ್ಟಿ ಸಂಗೀತ ಸಂಯೋಜನೆ ನೀಡಿದ್ದು, ಅಭಿನವ್ ಶ್ರೀನಿವಾಸ್ ಸಂಕಲನ ಹಾಗೂ ಶಿವರಾಜ್ ರಾಥೋಡ್ ಛಾಯಾಗ್ರಹಣವಿದೆ.
![](https://kannadadunia.com/wp-content/uploads/2024/01/3d9f2912-f195-4010-9072-0f02231285d3-822x1024.jpg)
![](https://kannadadunia.com/wp-content/uploads/2024/01/3d9f2912-f195-4010-9072-0f02231285d3-400x499.jpg)