ಪುತ್ರಿ ಮೇಲೆ ಅತ್ಯಾಚಾರ ಎಸಗಲು ಪ್ರಚೋದನೆ ನೀಡಿದ ಮಹಿಳೆ ಮತ್ತು ಆಕೆಯ ಗೆಳೆಯನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.
ಕೇರಳದ ಕಯನಾಡು ಪ್ರದೇಶದ ಮುಜಾಟ್ಟುಪುಳ ಬಳಿ ಘಟನೆ ನಡೆದಿದೆ. ಅರುಣ್ ಕುಮಾರ್ ಎಂಬಾತ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದು, ಆತನಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅತ್ಯಾಚಾರ ನಡೆಸಲು ಸಹಕಾರ ನೀಡಿದ ಮಹಿಳೆಗೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
ಮಹಿಳೆಯ ಗಂಡ ಕಾಯಿಲೆ ಪೀಡಿತನಾಗಿ ಹಾಸಿಗೆ ಹಿಡಿದಿದ್ದ. ಮಹಿಳೆಗೆ 36 ವರ್ಷದ ಅರುಣ್ ಕುಮಾರ್ ಜೊತೆಗೆ ಸಲುಗೆ ಇದ್ದು, ಆತ ಮನೆಗೆ ಬಂದು ಹೋಗುತ್ತಿದ್ದ. 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಮಹಿಳೆಯೇ ಸಹಕಾರ ನೀಡಿದ್ದಳು. 2017 ಮಾರ್ಚ್ ನಿಂದ ಆಗಸ್ಟ್ ವರೆಗೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಕೋರ್ಟ್ ನಲ್ಲಿ ವಿಚಾರಣೆ ನಡೆದು ತಪ್ಪಿತಸ್ಥರೆಂದು ಸಾಬೀತಾಗಿದ್ದರಿಂದ ಫೆಬ್ರವರಿ 24 ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.