ಹಾವೇರಿ : ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದವರಾದ ಅತ್ತೆ ದಾಕ್ಷಯಿಣಿ ಅವರು ತಮ್ಮ ಸೊಸೆಗೆ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.
ನೀರಲಗಿ ಗ್ರಾಮದವರಾದ ಅತ್ತೆ ದಾಕ್ಷಯಿಣಿ, ಸೊಸೆ ಶಿವನಗೌಡ ಪಾಟೀಲ್ ಅವರಿಗೆ ಗೃಹಲಕ್ಷ್ಮಿ ಹಣದಿಂದ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.
ಕಳೆದ 10 ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಒಂದು ಪೈಸೆ ಕೂಡ ಖರ್ಚು ಮಾಡದೇ ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ. ಸೊಸೆ ಹೊರಗಡೆ ಎಲ್ಲೂ ಕೆಲಸಕ್ಕೆ ಹೋಗಿ ದುಡಿಯಬಾರೆಂದು ಮನೆಯಲ್ಲೇ ಅಂಗಡಿ ಹಾಕಿಸಿಕೊಟ್ಟು ಅತ್ತೆ ಎಲ್ಲರ ಗಮನ ಸೆಳೆದಿದ್ದಾರೆ.
ಡಿಸಿಎಂ ಡಿಕೆಶಿ ಅಭಿನಂದನೆ
ಅಬಲೆಯರನ್ನು ಸಬಲಗೊಳಿಸುವುದೇ ನಮ್ಮ ಗೃಹಲಕ್ಷ್ಮಿ ಗ್ಯಾರಂಟಿಯ ಮುಖ್ಯ ಉದ್ದೇಶ. ಅದು ನಿರಂತರವಾಗಿ ಸಾಕಾರಗೊಳ್ಳುತ್ತಿರುವುದನ್ನು ಪತ್ರಿಕೆ ಹಾಗೂ ಸುದ್ದಿಮಾಧ್ಯಮಗಳಲ್ಲಿ ನೋಡಿ ಹೃದಯ ತುಂಬಿ ಬರುತ್ತಿದೆ. ಇದಕ್ಕೆ ಪೂರಕವೆಂಬಂತೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ನೀರಲಗಿ ಗ್ರಾಮದವರಾದ ಅತ್ತೆ ದಾಕ್ಷಯಿಣಿ ಅವರು ತಮ್ಮ ಸೊಸೆ ಕುಮಾರಿ ಶಿವನಗೌಡ ಪಾಟೀಲ್ ಅವರಿಗೆ ಗೃಹಲಕ್ಷ್ಮಿ ಹಣದಿಂದ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿರುವುದು ಗ್ಯಾರಂಟಿ ಜಾರಿಮಾಡಿದ್ದಕ್ಕೂ ಸಾರ್ಥಕವಾಯಿತು ಎನ್ನುವ ಭಾವ ಮೂಡಿಸಿದೆ. ನಮ್ಮ ಸರ್ಕಾರ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಗ್ಯಾರಂಟಿಗಳು ಇರಲಿವೆ. ಬಡವರ ಮನೆಗೆ ಬೆಳಕಾಗಲಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.