ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ ಈ ಗಿಡಕ್ಕೆ ಫುಲ್ಲಮ್ ಪುರ್ಚಿಗಿಡ ಎಂಬ ಹೆಸರೂ ಇದೆ.
ಆಯುರ್ವೇದದಲ್ಲಿ ಬಹುವಾಗಿ ಬಳಸುವ ಈ ಸಸ್ಯ ಗ್ರಾಮೀಣ ಪ್ರದೇಶದ ನಾಟಿ ವೈದ್ಯರಿಂದ ಹಲವು ಕಾಯಿಲೆಗಳಿಗೆ ಔಷಧಿಯಾಗಿ ಬಳಸಲ್ಪಡುತ್ತದೆ. ಜ್ವರ ಹಾಗೂ ಶೀತಜ್ವರಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ, ಹೊಟ್ಟೆನೋವಿಗೆ, ಹಾವು ಕಡಿತಕ್ಕೆ ಈ ಸಸ್ಯದಲ್ಲಿ ಪರಿಹಾರವಿದೆ. ಈ ಸಸ್ಯದ ಎಲೆಗಳನ್ನು ಅರೆದು ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತದೆ.
ಇದು ಅತಿಸಾರ ಜಂತುಹುಳುವಿನ ಸಮಸ್ಯೆ, ಮೊಡವೆಗಳಿಗೆ ಹಾಗೂ ಸಕ್ಕರೆ ಕಾಯಿಲೆಗೂ ಉತ್ತಮವಾದ ಔಷಧಿಯಾಗಿದೆ. ಈ ಸಸ್ಯದ ಎಲೆಗಳಲ್ಲಿ ಆಕ್ಸಾಲಿಕ್ ಆಮ್ಲಗಳು ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ತಿಂದರೆ ದೇಹದಲ್ಲಿನ ಕ್ಯಾಲ್ಸಿಯಂ ಪ್ರಮಾಣವನ್ನು ಪ್ರತಿಬಂಧಿಸುತ್ತದೆ. ಹಾಗಾಗಿ ಅಧಿಕ ಪ್ರಮಾಣದಲ್ಲಿ ಸೇವಿಸದೇ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ತೊಂದರೆ ಇಲ್ಲ.