alex Certify ಮಾದರಿ ‘ನೀತಿ ಸಂಹಿತೆ’ ಈಗ ಮೋದಿ ನೀತಿ ಸಂಹಿತೆಯಾಗಿ ಮಾರ್ಪಟ್ಟಿದೆ; ಟಿಎಂಸಿ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾದರಿ ‘ನೀತಿ ಸಂಹಿತೆ’ ಈಗ ಮೋದಿ ನೀತಿ ಸಂಹಿತೆಯಾಗಿ ಮಾರ್ಪಟ್ಟಿದೆ; ಟಿಎಂಸಿ ವ್ಯಂಗ್ಯ

TMC Twitter Account Hacked: ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಅಕೌಂಟ್ ಹ್ಯಾಕ್; ಹೆಸರು ಬದಲಾಯಿಸಿ ವಿಡಿಯೋ ಪೋಸ್ಟ್-trinamool congress twitter account hacked ,ರಾಷ್ಟ್ರ-ಜಗತ್ತು ಸುದ್ದಿ

ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ ಈಗ ಮೋದಿ ನೀತಿ ಸಂಹಿತೆಯಾಗಿ ಮಾರ್ಪಟ್ಟಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ವ್ಯಂಗ್ಯವಾಡಿದೆ.

ಮಂಗಳವಾರದಂದು ಟಿಎಂಸಿ ನಾಯಕರು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಘೋರ ರೀತಿಯಲ್ಲಿ ಉಲ್ಲಂಘಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಟಿಎಂಸಿ ರಾಜ್ಯಸಭೆ ಸದಸ್ಯರಾದ ಸಾಕೇತ್ ಗೋಖಲೆ ಮತ್ತು ಸಾಗರಿಕ ಘೋಷ್, ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಲೋಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದ್ದಾರೆ. ಅಷ್ಟಾದರೂ ಕೂಡ ಕೇಂದ್ರ ಚುನಾವಣಾ ಆಯೋಗ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...