ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಇಡೀ ದೇಶದ ಗಮನ ಸೆಳೆದಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿರ ಸೋಲಿಗೆ ಕಾರಣರಾದ ಆಪ್ ಪಕ್ಷದ ಅಭ್ಯರ್ಥಿ ಲಾಭ್ ಸಿಂಗ್‌ರ ಜೀವನಗಾಥೆ ಈಗ ಬಹು ಚರ್ಚಿತ ವಿಷಯವಾಗಿದೆ.
ಬರ್ನಾಲಾ ಜಿಲ್ಲೆಯ ಉಗೋಕೆ ಗ್ರಾಮದಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಲಾಭ್ ಸಿಂಗ್, ಪಂಜಾಬ್ ವಿಧಾನ ಸಭಾ ಚುನಾವಣೆಯ ಹೈಪ್ರೊಫೈಲ್ ಹಣಾಹಣಿಯಲ್ಲಿ ಖುದ್ದು ಮುಖ್ಯಮಂತ್ರಿ ವಿರುದ್ಧವೇ ಸೆಣಸಿದ್ದಾರೆ. ಚುನಾವಣೆಯಲ್ಲಿ ದೈತ್ಯನಿಗೇ ಮಣ್ಣುಮುಕ್ಕಿಸುವ ಮೂಲಕ ಲಾಭ್ ಸಿಂಗ್ ಈಗ ಎಲ್ಲೆಲ್ಲೂ ಸುದ್ದಿಯಲ್ಲಿದ್ದಾರೆ. ಚನ್ನಿ ಸ್ಪರ್ಧಿಸಿದ್ದ ಎರಡನೇ ಕ್ಷೇತ್ರವಾದ ಬಹದ್ದೂರ್‌ನಲ್ಲಿ ಲಾಭ್ ಸಿಂಗ್ ಈ ಗೆಲುವು ಕಂಡಿದ್ದಾರೆ.
35 ವರ್ಷ ವಯಸ್ಸಿನ ಲಾಭ್ ಸಿಂಗ್ 12ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. ಬಳಿಕ ಮೊಬೈಲ್ ರಿಪೇರಿ ಅಂಗಡಿ ತೆರೆದ ಲಾಭ್ ಸಿಂಗ್, ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. ಆಪ್ ಪಕ್ಷ ಸೇರುತ್ತಲೇ ತಮ್ಮ ಬುದ್ಧಿವಂತಿಕೆ ಹಾಗೂ ಪರಿಶ್ರಮದಿಂದ ವಿಧಾನ ಸಭಾ ಚುನಾವಣೆಯ ಟಿಕೆಟ್ ಪಡೆಯಲೂ ಸಹ ಲಾಭ್ ಸಫಲರಾಗಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಶಿವಸೇನೆ ಕಳಪೆ ಪ್ರದರ್ಶನ: ನೋಟಾಗಿಂತಲೂ ಕಡಿಮೆ ಮತ ಪಡೆದ ಸೇನೆ….!
ತಮ್ಮ ಆಸ್ತಿ ವಿವರದ ಕುರಿತು ಸಲ್ಲಿಸಿದ ಅಫಿಡವಿಟ್‌ನಲ್ಲಿ, ತಮ್ಮ ಬಳಿ 2014ರ ಮಾಡೆಲ್‌ನ ಮೋಟರ್ ಸೈಕಲ್ ಮಾತ್ರವೇ ಇರುವುದಾಗಿ ಹೇಳಿಕೊಂಡಿದ್ದಾರೆ.
ಮೀಸಲು ಕ್ಷೇತ್ರವಾದ ಬಹದ್ದೂರ್‌ನಲ್ಲಿ ಆಪ್ 2017ರಲ್ಲೂ ಗೆಲುವು ಸಾಧಿಸಿತ್ತು. ಅಲ್ಲದೇ ಈ ಕ್ಷೇತ್ರದ ಸುತ್ತಮುತ್ತಲಿನ ದಿರ್ಬಾ, ಬರ್ನಾಲಾ ಹಾಗೂ ಮೆಹಲ್ ಖಾನ್‌ಗಳಲ್ಲೂ ಸಹ ಆಪ್ ಗೆಲುವು ಕಂಡಿತ್ತು. ಇದೇ ಕ್ಷೇತ್ರ ಇರುವ ಲೋಕಸಭಾ ಕ್ಷೇತ್ರವಾದ ಸಂಗ್ರೂರ್‌ನಲ್ಲೂ ಸಹ 2019ರ ಲೋಕಸಭಾ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಭಗ್ವಂತ್ ಸಿಂಗ್ ಮಾನ್ ಗೆಲುವು ಕಂಡಿದ್ದರು.