ಮಡಿಕೇರಿ : ಕಾಡಾನೆ ಕಾಜೂರು ಕರ್ಣನಿಗೆ ದುಷ್ಕರ್ಮಿಗಳು ಗುಂಡೇಟು ಹೊಡೆದಿದ್ದು, ಕೀವು ತುಂಬಿ ಆನೆ ನರಕಯಾತನೆ ಅನುಭವಿಸಿದೆ.
ದುಬಾರೆ ಕ್ರಾಲ್ ನಲ್ಲಿ ಅರಣ್ಯಾಧಿಕಾರಿಗಳು ಸೆರೆಹಿಡಿದಿರುವ ಆನೆಗೆ ದುಷ್ಕರ್ಮಿಗಳು ಗುಂಡೇಟು ಹೊಡೆದಿರುವುದು ಗೊತ್ತಾಗಿದೆ. ಗುಂಡು ತಗುಲಿ ಕೆಲವು ದಿನಗಳ ಬಳಿಕ ಕೀವು ತುಂಬಿದ್ದು, ಪಶುವೈದ್ಯಾಧಿಕಾರಿಗಳು ಗುಂಡನ್ನು ಹೊರ ತೆಗೆದು ಚಿಕಿತ್ಸೆ ನೀಡಿದ್ದಾರೆ.
ಮಡಿಕೇರಿ, ಕೊಡಗು ಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ಭಾರಿ ಉಪಟಳ ನೀಡುತ್ತಿದ್ದ ಕಾಡಾನೆ ಕಾಜೂರು ಕರ್ಣನನ್ನು ಅರಣ್ಯ ಇಲಾಖೆ ಸೆರೆ ಹಿಡಿದಿತ್ತು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಪಳಗಿಸುವಲ್ಲಿ ನಿರತರಾಗಿದ್ದರು. ಪರಿಶೀಲನೆ ವೇಳೆ ಆನೆಗೆ ಗುಂಡು ತಗುಲಿರುವುದು ಪತ್ತೆಯಾಗಿದ್ದು, ಗಾಯಗಳಾಗಿ ಕೀವು ಕೂಡ ತುಂಬಿತ್ತು. ಕಾಜೂರು ಗ್ರಾಮದಲ್ಲಿ ದುಷ್ಕರ್ಮಿಗಳು ಇದಕ್ಕೆ ಗುಂಡೇಟು ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.