ಎಂ ಡಿ ಶ್ರೀಧರ್ ನಿರ್ದೇಶನದ ಪ್ರವೀಣ್ ತೇಜ್ ನಟನೆಯ ‘ಜಂಬೂ ಸರ್ಕಸ್’ ಚಿತ್ರದ ‘ಲೀಲಾಜಾಲ ನಿಂಗೆ ಎಲ್ಲಾ’ ಎಂಬ ಮೆಲೋಡಿ ಹಾಡನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ನಕುಲ್ ಅಭ್ಯಂಕರ್ ಈ ಹಾಡಿಗೆ ಧ್ವನಿಯಾಗಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ.
ಈ ಚಿತ್ರವನ್ನು ಶ್ರೀ ಮಹತಿ ಕಂಬೈನ್ಸ್ ಬ್ಯಾನರ್ ನಲ್ಲಿ ಹೆಚ್ ಸಿ ಸುರೇಶ್ ನಿರ್ಮಾಣ ಮಾಡಿದ್ದು, ಪ್ರವೀಣ್ ತೇಜ್ ಸೇರಿದಂತೆ ಅಂಜಲಿ ಅನೀಶ್, ಅವಿನಾಶ್, ಅಚ್ಯುತ್ ಕುಮಾರ್, ರವಿಶಂಕರ್ ಗೌಡ, ಆಶಾಲತಾ, ಸ್ವಾತಿ, ಲಕ್ಷ್ಮಿ ಸಿದ್ದಯ್ಯ, ನಯನಾ, ಜಗಪ್ಪ ತೆರೆ ಹಂಚಿಕೊಂಡಿದ್ದಾರೆ. ಜ್ಞಾನೇಶ್ ಮಾತಾಡ್ ಸಂಕಲನ, ಏ ವಿ ಕೃಷ್ಣಕುಮಾರ್ ಛಾಯಾಗ್ರಹಣ, ರಘು ನಿಡವಳ್ಳಿ ಸಂಭಾಷಣೆ, ಡಾ. ರವಿವರ್ಮ ಸಾಹಸ ನಿರ್ದೇಶನ, ಹಾಗೂ ಎ ಹರ್ಷ ನೃತ್ಯ ನಿರ್ದೇಶನವಿದೆ.