
ನೈಜ ಘಟನಾಧಾರಿತ ಈ ಚಿತ್ರದಲ್ಲಿ ಷಣ್ಮುಖ ಜೈ ಅವರಿಗೆ ಜೋಡಿಯಾಗಿ ಅಪ್ಸರಾ ಅಭಿನಯಿಸಿದ್ದು, ಪದ್ಮಾ ವಾಸಂತಿ, ಶೋಭರಾಜ್, ಬಾಲರಾಜ್, ಪತ್ರೆ ನಾಗರಾಜ್, ವರ್ಧನ್, ಸೂರಜ್, ಕಡ್ಡಿ ವಿಶ್ವ ಮೈಸೂರು ಉಳಿದ ತಾರಾಂಗಣದಲ್ಲಿದ್ದಾರೆ.
ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ, ಯರಂಗಳ್ಳಿ ಮರಿಯಮ್ಮ ನಿರ್ಮಾಣ ಮಾಡಿದ್ದಾರೆ. ಶ್ರೀ ಜವಳಿ ಸಂಕಲನ, ಜೈ ಆರ್ಯ ನೃತ್ಯ ನಿರ್ದೇಶನ, ಹಾಗೂ ಚಂದ್ರು ಬಂಡೆ ಅವರ ಸಾಹಸ ನಿರ್ದೇಶನವಿದೆ.