ಜೂನ್ 21ಕ್ಕೆ ಬಿಡುಗಡೆಯಾಗಲಿದೆ ‘ತಾಜ್’ ಚಿತ್ರದ ಮೆಲೋಡಿ ಹಾಡು 20-06-2024 11:20AM IST / No Comments / Posted In: Featured News, Live News, Entertainment ರಾಜರತ್ನ ನಿರ್ದೇಶನದ ಷಣ್ಮುಖ ಅಭಿನಯದ ಬಹುನಿರೀಕ್ಷಿತ ‘ತಾಜ್’ ಚಿತ್ರದ ‘ಇನ್ನೇನಿದೆ’ ಎಂಬ ಮೆಲೋಡಿ ಹಾಡು ಇದೆ ಜೂನ್ 21ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಆಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಶ್ರೀ ಪಾವನಿ ಲಕ್ಷ್ಮಿ ಕಂಬೈನ್ಡ್ಸ್ ಬ್ಯಾನರ್ ನಲ್ಲಿ ಶ್ರೀಮತಿ ಲಕ್ಷ್ಮಿ ಷಣ್ಮುಖ, ಹಾಗೂ ಯರಂಗಳ್ಳಿ ಮರಿಯಮ್ಮ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಷಣ್ಮುಖ ಜೈ ಹಾಗೂ ಅಪ್ಸರಾ ಪ್ರಮುಖ ಪಾತ್ರದಲ್ಲಿದ್ದಾರೆ. ಸೂರಜ್, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಶೋಭರಾಜ್, ವರ್ಧನ್, ಪದ್ಮಾವಾಸಂತಿ, ಬಾಲರಾಜ್ ವಾಡಿ. ಉಳಿದ ಪಾತ್ರವರ್ಗದಲ್ಲಿದ್ದಾರೆ. ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆ ನೀಡಿದ್ದು, ಶ್ರೀ ಜವಳಿ ಅವರ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ, ಹಾಗೂ ಜೈ ಆರ್ಯ ನೃತ್ಯ ನಿರ್ದೇಶನವಿದೆ. 🎶 Get ready to be enchanted! The melodious "Innenide" is releasing on June 21st at 10:10 AM on A2 Music! 🎵 Feel the melody and let it captivate your soul. ✨ #Innenide #A2Music #MelodyMagic #NewRelease pic.twitter.com/wLwT6naGf4 — A2 Music (@A2MusicSouth) June 19, 2024