![Ranaksha Movie: ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಹೀರೋ ಆದ 'ಕಾಮಿಡಿ ಕಿಲಾಡಿ' ಖ್ಯಾತಿಯ ಸೀರುಂಡೆ ರಘು - comedy khiladigalu fame seerunde raghu starrer ranaksha movie first look released - Vijay Karnataka](https://vijaykarnataka.com/thumb/106445730/seerunde-raghu-comedy-106445730.jpg?imgsize=90076&width=1200&height=900&resizemode=75)
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು ನಾಯಕನಾಗಿ ಅಭಿನಯಿಸಿರುವ ‘ರಣಾಕ್ಷ’ ಚಿತ್ರದ ”ಇರಲೇ ಜೊತೆಗೆ” ಎಂಬ ಮೆಲೋಡಿ ಹಾಡೊಂದು ನಾಳೆ ಪ್ರೇಮಿಗಳ ದಿನದಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಕುರಿತು ಚಿತ್ರದ ತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ.
ಕೆ ರಾಘವ್ ಆಕ್ಷನ್ ಕಟ್ ಹೇಳಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸೀರುಂಡೆ ರಘು, ರಕ್ಷಾ, ಹನುಮಂತು, ಅಪೂರ್ವ, ಮತ್ತು ಮುನಿರಾಜು ಬಣ್ಣ ಹಚ್ಚಿದ್ದು, ಕೆ ವಿ ಆರ್ ಪಿಚ್ಚರ್ಸ್ ಬ್ಯಾನರ್ ನಡಿ ರಾಮು ಮತ್ತು ಶ್ರೀಮತಿ ಶೋಭಾ ಶಿವಾಜಿ ರಾವ್ ನಿರ್ಮಾಣ ಮಾಡಿದ್ದಾರೆ. ಧನುಷ್ ಎಲ್ ಬಿದ್ರೆ ಸಂಕಲನ, ದೀಪಕ್ ಕುಮಾರ್ ಛಾಯಾಗ್ರಹಣವಿದ್ದು, ವಿಶಾಲ್ ಆಲಾಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
![](https://kannadadunia.com/wp-content/uploads/2024/02/77ccaa43-9cb6-4d3b-8135-251c6051dc84-400x605.jpg)