ಪ್ರತಿಭೆಗಳು ತಮ್ಮ ತಮ್ಮ ಪ್ರತಿಭೆ ಪ್ರದರ್ಶಿಸಲು ಸೋಶಿಯಲ್ ಮೀಡಿಯಾ ಬಹುದೊಡ್ಡ ವೇದಿಕೆಯಾಗಿ ಗುರುತಿಸಿಕೊಂಡಿದೆ. ಸೋಶಿಯಲ್ ಮೀಡಿಯಾದ ಮೂಲಕ ಹಲವು ಪ್ರತಿಭೆಗಳು ಬೆಳಕಿಗೆ ಬರುತ್ತಿರುತ್ತಾರೆ.
ಇಲ್ಲೋರ್ವ ವ್ಯಕ್ತಿಯೋರ್ವ 111 ಸೆಕೆಂಡುಗಳಲ್ಲಿ 111 ಬಗೆಯ ವಿವಿಧ ವಾದ್ಯಗಳನ್ನು ನುಡಿಸಿ ದಾಖಲೆ ಬರೆದಿದ್ದಾನೆ. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಒಬ್ಬ ವ್ಯಕ್ತಿಯು ವಾದ್ಯವನ್ನು ಬದಲಾಯಿಸುವ ಮೂಲಕ ನುಡಿಸುತ್ತಿರುವುದನ್ನು ನೀವು ನೋಡಬಹುದು. ಮೊದಲು ಕೊಳಲು ನುಡಿಸುವ ಮೂಲಕ ಪ್ರಾರಂಭಿಸುತ್ತಾರೆ ಮತ್ತು ನಂತರ ಎಲೆಕ್ಟ್ರಿಕ್ ಪಿಯಾನೋ, ಅಕಾರ್ಡಿಯನ್, ಕಾರ್ನೆಟ್, ರೈಡ್ ಸಿಂಬಲ್, ಎಲೆಕ್ಟ್ರಿಕ್ ಬಾಸ್, ಸ್ಯಾಕ್ಸೋಫೋನ್, ಗಿಟಾರ್ ಮತ್ತು ಬಾಂಜೊ ಸೇರಿದಂತೆ ಒಟ್ಟು 111 ವಾದ್ಯಗಳನ್ನು ನುಡಿಸುತ್ತಾರೆ. ಸದ್ಯ,ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.